Mango Lassi Recipe | ಮಾವಿನ ಹಣ್ಣಿನ ಲಸ್ಸಿ | Boldsky
  • 6 years ago
ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹತ್ತು ಹಲವು ವಿಧಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿವೆ. ಇದರ ಹಣ್ಣಿನ ರಸಗಳೊಂದಿಗೆ ಮಾಡಿದ ನಾನಾ ಬಗೆಯ ರೆಸಿಪಿಗಳು ಎಲ್ಲರ ಮನಗೆಲ್ಲುತ್ತ, ಅದರಲ್ಲೂ ಮಾವಿನ ಹಣ್ಣಿನಿಂದ ಮಾಡಿದ ಲಸ್ಸಿ ಅಂತೂ ನೆನೆಸಿಕೊಂಡಾಗಲೇ ಬಾಯಲ್ಲಿ ನೀರೂರಿಸುತ್ತದೆ. ಇನ್ನು ಮಾವಿನ ಹಣ್ಣಿನಲ್ಲಿ 10ಕ್ಕೂ ಹೆಚ್ಚಿನ ಆರೋಗ್ಯಕರ ಗುಣಗಳಿವೆ. ಮಾವಿನಹಣ್ಣಿನಲ್ಲಿ ಕೊಬ್ಬಿನಂಶ, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ತೀರಾ ಕಡಿಮೆ ಪ್ರಮಾಣದಲ್ಲಿದೆ.ಅಲ್ಲದೆ ಇದರಲ್ಲಿ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ ಮತ್ತು ವಿಟಮಿನ್ ಯಥೇಚ್ಛವಾಗಿ ಹೊಂದಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ಒದಗಿಸುತ್ತದೆ. ದಿನದ ಚಟುವಟಿಕೆಯ ಬಳಿಕ ಮಧ್ಯಾಹ್ನದ ಊಟದ ನಂತರ ಜೋಮು ಹತ್ತುವುದು ಸಾಮಾನ್ಯ. ದೇಹದಿಂದ ಶಕ್ತಿಯೂ ಉಡುಗಿದಂತೆ ಭಾಸವಾಗುತ್ತದೆ. ಊಟದ ಬಳಿಕ ಮಾವಿನ ಲಸ್ಸಿ ಕುಡಿಯುವುದರಿಂದ ದೇಹ ಮೊದಲಿನ ಚಟುವಟಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
Recommended