ಮೊಹಮ್ಮದ್ ಹರೀಶ್ ನಲಪಾಡ್ ಪ್ರಕರಣ : ಮಹಿಳೆಯ ವಿಡಿಯೋ ವೈರಲ್ | Oneindia Kannada

  • 6 years ago
A lady blames media, government, pro Hindu organizations and police in a whats app video. She claimed that, she had tried to file a complaint against Mohammed Harris Nalapad and his supporters, but did not get help from anyone.

ಈ ವಿಡಿಯೋದಲ್ಲಿ ಅವರು ಪೊಲೀಸರು, ಸರ್ಕಾರ, ವಿರೋಧಪಕ್ಷ, ಹಿಂದುಪರ ಸಂಘಟನೆ ಎಲ್ಲರನ್ನೂ ದೂರಿದ್ದು, ಮೂರು ವರ್ಷದ ಹಿಂದೆ ನಿಮ್ಮ ನೈತಿಕತೆ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ."ಚುನಾವಣೆ ಹತ್ತಿರ ಬರ್ತಾ ಇರೋದ್ರಿಂದ ವಿರೋಧ ಪಕ್ಷಗಳು ಹೈಪರ್ ಆಕ್ಟಿವ್ ಆಗಿವೆ, ಆಡಳಿತ ಪಕ್ಷಕ್ಕೆ ಎಲ್ಲಿ ಕಾಲುಜಾರುತ್ತದೋ ಅನ್ನೋ ಭಯ ಅದಿಕ್ಕೇ ಈ ಪ್ರಕರಣಕ್ಕೆ ಇಷ್ಟೆಲ್ಲ ಹೈಪ್ ಸಿಕ್ತಾ ಇದೆ. ಆದರೆ ಮೂರು ವರ್ಷದ ಹಿಂದೆ ನಾನೂ ದೂರು ನೀಡುವುದಕ್ಕೆ ಬಂದಾಗ ನನ್ನ ಕಣ್ಣೆದುರಲ್ಲೇ ದೂರನ್ನ ಹರಿದು ಎಸೀತಾ ಇದ್ರಲ್ಲ, ಆಗ ಪೊಲೀಸರ ನೈತಿಕತೆ ಎಲ್ಲಿ ಹೋಗಿತ್ತು?, ಮಾಧ್ಯಮಗಳ್ಯಾಕೆ ನನ್ನ ಜೊತೆ ಬರಲಿಲ್ಲ? ಐನೂರು ಜನರನ್ನ ಸೇರಿಸಿದ್ರೆ ನಾವೂ ನಿಮ್ಮ ಜೊತೆ ಹೋರಾಡ್ತೀವಿ, ಇಲ್ಲಾಂದ್ರೆ ಆಗಲ್ಲ ಅಂದ ಹಿಂದುಪರ ಸಂಘಟನೆಗಳಿಗೆ ಆಗ ಹೆಣ್ಣುಮಗಳ ಕಣ್ಣೀರು ಕಾಣಲಿಲ್ವಾ?" ಎಂದು ಅವರು ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.

Recommended