ರಾಜಕೀಯ ತಿರುವು ಪಡೆದುಕೊಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಪ್ರಕರಣ | Oneindia Kannada

  • 6 years ago
ಜನಸಾಮಾನ್ಯರ ಕೈಗೆಟುಕದ, ಶ್ರೀಮಂತರ ಮಕ್ಕಳಿಗೆ ದಿನವೂ 'ತೀರ್ಥ' ಯಾತ್ರೆಯ ತಾಣದಂತಾಗಿರುವ ಬೆಂಗಳೂರು ಹೃದಯ ಭಾಗದಲ್ಲಿರುವ ಯುಬಿಸಿಟಿಯಲ್ಲಿ ಶನಿವಾರ ರಾತ್ರಿ (ಫೆ 17) ನಲಪ್ಪಾಡ್ & ಕೋ ತಂಡದ ಪಕ್ಷಾತೀತವಾದ ಪಾರ್ಟಿಯಲ್ಲಿನ ಘಟನೆ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪ್ಪಾಡ್ ಮತ್ತು ಆತನ ಜೊತೆಗಿದ್ದ ಸಹಚರರು, ವಿದ್ವತ್ ಎನ್ನುವ ಯುವಕನ ಮೇಲೆ ನಡೆಸಿದ್ದ ಹಲ್ಲೆ, ಚುನಾವಣಾ ಈ ಸಮಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ವೋಟ್ ಬ್ಯಾಂಕ್ ವಿಷಯವಾಗಿ ಹೋಗಿದೆ.

Recommended