ಮುಖದ ಸೌಂದರ್ಯ ಹೆಚ್ಚಾಗಬೇಕೇ? ಹಾಗಾದರೆ ತಪ್ಪದೇ ಈ ವಿಡಿಯೋ ನೋಡಿ | Boldsky
  • 5 years ago
ಮನುಷ್ಯನ ದೇಹದ ಪ್ರತಿಯೊಂದು ಭಾಗಕ್ಕೆ ಕೂಡ ಪೋಷಕಾಂಶಗಳು ಅಗತ್ಯವಾಗಿ ಬೇಕೇಬೇಕು. ಪೋಷಕಾಂಶಗಳು ಸಿಗದೆ ಇದ್ದರೆ ದೇಹದ ಅಂಗಗಳು ಅಥವಾ ಆವಯವಗಳು ಕೆಲಸ ಮಾಡದೆ ಇರಬಹುದು. ದೇಹದ ಬೆಳವಣಿಗೆಗೆ ಪ್ರಮುಖವಾಗಿ ಪ್ರೋಟೀನ್ ಅಗತ್ಯವಿದೆ. ಪ್ರೋಟೀನ್ ಹಲವಾರು ಮೂಲಗಳಿಂದ ನಮ್ಮ ದೇಹಕ್ಕೆ ಲಭ್ಯವಾಗುವುದು. ಅದೇ ನಮ್ಮ ಚರ್ಮಕ್ಕೂ ಪ್ರೋಟೀನ್ ಬೇಕೇ ಬೇಕು. ದೇಹಕ್ಕೆ ಪ್ರೋಟೀನ್ ಬೇಕಾದರೆ ಧಾನ್ಯಗಳನ್ನು ಸೇವಿಸಬೇಕು. ಅದೇ ತ್ವಚೆಗೆ ಪ್ರೋಟೀನ್ ಬೇಕಾದರೆ ಧಾನ್ಯಗಳಿಂದಲೇ ತ್ವಚೆಯ ಆರೈಕೆ ಮಾಡಬೇಕಾಗುತ್ತದೆ. ತ್ವಚೆಯ ಆರೈಕೆ ಮಾಡಲು ಸರಿಯಾದ ಧಾನ್ಯ ಆಯ್ಕೆ ಮಾಡಿಕೊಳ್ಳುವುದು ಅತೀ ಅಗತ್ಯ. ಅದರಲ್ಲೂ ನಮಗೆ ತಿನ್ನಲು ತುಂಬಾ ಇಷ್ಟವಾಗಿರುವ ಮಸೂರ್ ದಾಲ್ ಅನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದು. ಮಸೂರ್ ದಾಲ್‌ನ ಬಣ್ಣ ಕಿತ್ತಳೆಯಾಗಿರುವ ಕಾರಣದಿಂದ ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಡಗಿದೆ. ಆದರೆ ತ್ವಚೆಗೆ ಮಸೂರ್ ದಾಲ್ ಅಥವಾ ಕೆಂಪು ಬೇಳೆ ಅನ್ನು ಬಳಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇದೆ. ಮಸೂರ್ ದಾಲ್‌ನ್ನು ಮಾತ್ರ ಬಳಸಿಕೊಂಡು ತ್ವಚೆಯ ಆರೈಕೆ ಮಾಡಲು ಸಾಧ್ಯವಿಲ್ಲ. ಮಸೂರ್ ದಾಲ್ ನೊಂದಿಗೆ ಇತರ ಕೆಲವೊಂದು ಸಾಮಗ್ರಿಗಳನ್ನು ಸೇರಿಸಿಕೊಂಡು ತ್ವಚೆಯ ಆರೈಕೆ ಮಾಡಬೇಕು. ಒಂದು ಚಮಚ ಜೇನುತುಪ್ಪ, ಚಿಟಿಕೆಯಷ್ಟು ಅರಿಶಿನದ ಪುಡಿ, ಎರಡು ಟೆಬಲ್ ಚಮಚ ಹಾಲು ಹಾಗೂ ಕೆಂಪು ಬೇಳೆಯ ಪೌಡರ್... ಬನ್ನಿ ಮಸೂರ್ ದಾಲ್ ಅಥವಾ ಕೆಂಪು ಬೇಳೆ ಬಳಸಿ ಮಾಡುವ ಫೇಸ್ ಪ್ಯಾಕ್ ಮಾಡುವ ವಿಧಾನ ಈ ವಿಡಿಯೋದಲ್ಲಿ ನೀಡಿದ್ದೇವೆ, ನೋಡಿ
Recommended