ಶಿರಾಡಿಘಾಟ್ ರಸ್ತೆ ಸಂಚಾರ ಮತ್ತೆ ಬಂದ್‌! ರೇವಣ್ಣ ಏನಾಯ್ತು ನಿಮ್ಮ ವಾಸ್ತುಶಾಸ್ತ್ರ !!
  • 6 years ago
Heavy rain, landslide in several part of the Shiradi Ghat and again ghat closed for traffic: What happened to PWD Minister Revanna's Vastu Shastra? During the inauguration of ghat, Revanna changed the direction of inauguration spot from west to east as per Vastu Shastra.


ಬೆಂಗಳೂರಿನಿಂದ ಕರಾವಳಿಗೆ ಪ್ರಮುಖ ಕೊಂಡಿಯಾಗಿರುವ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತವಾದ ಒಂದೇ ತಿಂಗಳಲ್ಲಿ ಮತ್ತೆ ಬಂದ್ ಆಗಿದೆ. ಮುಂಗಾರು ಮಳೆಯ ಆರ್ಭಟ ಮತ್ತು ಭೂಕುಸಿತಕ್ಕೆ ನಲುಗಿರುವ ಈ ಘಾಟ್ ಅನ್ನು ಸದ್ಯ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಹಾಸನ ಜಿಲ್ಲಾಡಳಿತ ನಿಷೇಧ ಹೇರಿದೆ.ಉದ್ಘಾಟನೆಗೊಂಡ ಒಂದು ತಿಂಗಳಲ್ಲೇ ಶಿರಾಡಿ ಘಾಟ್ ಮತ್ತೆ ಸಂಚಾರಕ್ಕೆ ಬಂದ್ ಆಗಿದೆ. ಅಲ್ಲಲ್ಲಿ ಭೂಕುಸಿತದಿಂದಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. 74 ಕೋಟಿ ರೂ. ವೆಚ್ಚ, 12.38 ಕಿಮೀ ಉದ್ದದ ಕಾಂಕ್ರೀಟ್ ರಸ್ತೆಯನ್ನು ಮತ್ತೆ ರೆಡಿಮಾಡಲು ಮೂರು ತಿಂಗಳು ಬೇಕಾಗಬಹುದು ಎನ್ನುವ ಸುದ್ದಿಯಿದೆ. ರಸ್ತೆ ಉದ್ಘಾಟನೆ ಸಂದರ್ಭ ಲೋಕೋಪಯೋಗಿ ಸಚಿವ ರೇವಣ್ಣ, ವಾಸ್ತು ಶಾಸ್ತ್ರದ ಪ್ರಕಾರವೇ ಉದ್ಘಾಟನೇ ಮಾಡಿದ್ರು. ಈಗ ಅವರ ವಾಸ್ತು ಕೈಕೊಟ್ಟಿದೆ ಎಂಬ ಮಾತು ಕೇಳಿ ಬರುತ್ತಿದೆ.
Recommended