ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲೋದು ಸೆಲೆಬ್ರಿಟಿನಾ ಅಥವಾ ಸಾಮಾನ್ಯನಾ? | Filmibeat Kannada
  • 6 years ago
'ಬಿಗ್ ಬಾಸ್ ಕನ್ನಡ-5' ಗ್ರ್ಯಾಂಡ್ ಫನಾಲೆಗೆ ಕೇವಲ ನಾಲ್ಕು ದಿನ ಮಾತ್ರ ಬಾಕಿಯಿದೆ. ಅಂತಿಮ ಹಂತಕ್ಕೆ 5 ಜನ ಸ್ಫರ್ಧಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಕಳೆದ ವಾರ ಅನುಪಮಾ ಗೌಡ ಬಿಗ್ ಮನೆಯಿಂದ ಹೊರಹೋಗಿದ್ದರು.ಬಿಗ್ ಬಾಸ್ ಕನ್ನಡ 5 ಫಿನಾಲೆ ಹಂತಕ್ಕೆ ಒಟ್ಟು ಐದು ಜನ ಪ್ರವೇಶ ಪಡೆದುಕೊಂಡಿದ್ದು, ಇದರಲ್ಲಿ ಇಬ್ಬರು ಸಾಮಾನ್ಯರಿದ್ದು, 3 ಜನ ಸೆಲೆಬ್ರಿಟಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

6 ಜನ ಇದ್ದ ಮನೆಯಲ್ಲಿ ಸಮೀರಾಚಾರ್ಯ ನಿನ್ನೆ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಉಳಿದ ಐದು ಸ್ಪರ್ಧಿಗಳು ನೇರವಾಗಿ ಫಿನಾಲೆಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಐದು ಜನರಲ್ಲಿ ಫೈನಲ್ ಯಾರು ಗೆಲ್ಲಬಹುದು ಎಂದು ಎಲ್ಲೆಡೆ ಚರ್ಚೆಯಾಗ್ತಿದೆ. ಈ ಚರ್ಚೆಯ ಮಧ್ಯೆ ಈ ಬಾರಿಯ ಬಿಗ್ ಬಾಸ್ ಕಿರೀಟಕ್ಕೆ ಮುತ್ತಿಡುವುದು ಸೆಲೆಬ್ರಿಟಿನಾ ಅಥವಾ ಕಾಮನ್ ಮ್ಯಾನ್ ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ವಿಶೇಷ ವರದಿ ಇಲ್ಲಿದೆ

Kannada actor Karthik Jayaram, Rap singer Chandan Shetty, Nivedita Gowda, Divakar, Shruti Prakash have got admission to Big Boss Kannada 5 Finale.
Recommended