Bigg Boss Kannada Season 5 : ಬಿಗ್ ಬಾಸ್ ವಿರುದ್ಧ ಕಾಮನ್ ಮ್ಯಾನ್ ದೂರು ದಾಖಲು | Filmibeat Kannada
  • 6 years ago
'ಬಿಗ್ ಬಾಸ್' ವಿರುದ್ಧ ದೂರು ದಾಖಲಿಸಲು ಮುಂದಾದ ಕಾಮನ್ ಮ್ಯಾನ್! ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್' ಕನ್ನಡ ರಿಯಾಲಿಟಿ ಶೋ ವಿರುದ್ಧ ಮೈಸೂರು ಮೂಲದ ವ್ಯಕ್ತಿಯೋರ್ವ ದೂರು ನೀಡಲು ಮುಂದಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಸಾಮಾನ್ಯರಿಗೆ ಅವಕಾಶ ನೀಡಲಾಗುವುದೆಂದು ಘೋಷಿಸಿತ್ತು. ಆದ್ರೆ, ನನಗೆ ಅವಕಾಶ ನೀಡದೆ ನನಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಟೈಲರ್ ಭಯಾನಕ ನಾಗರಾಜ ಉರುಫ್ ನಾಗರಾಜ್ ದೂರಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರಸ್ತುತ ನಡೆಯುತ್ತಿರುವ ಬಿಗ್ ಬಾಸ್ 5ನೇ ಆವೃತ್ತಿಯಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗುತ್ತೆ ಎಂದು ಘೋಷಿಸಿದ್ದರು. ಅನ್ ಲೈನ್ ಮುಖಾಂತರ 40 ಸಾವಿರ ಅಧಿಕ ಅರ್ಜಿಗಳು ಬಂದಿದ್ದು, ಇದರಂತೆ ನಾನು ಅರ್ಜಿ ಹಾಕಿದ್ದೆ. ಅರ್ಜಿ ಅಂಗೀಕೃತವಾಗಿ ರಸೀದಿಯು ಬಂದಿತ್ತು. ಕಾರ್ಯಕ್ರಮ ಆರಂಭವಾಗುವವರೆಗೆ ಕಾದಿದ್ದೆ. ಆದರೆ, ಯಾವುದೇ ಸೂಚನೆ ನೀಡದೆ ಇದ್ದರಿಂದ ನನ್ನ ಸಮಯ ವ್ಯರ್ಥವಾಗಿದೆ. ಈ ಬಗ್ಗೆ ನ್ಯಾಯಾಂಗ ಹೋರಾಟ ಮಾಡಲಾಗುವುದು'' ಎಂದು ಆರೋಪಿಸಿದರು.
Recommended