ಪದ್ಮಾವತಿ ಪುರಾಣದ ವರ್ತಮಾನ | Filmibeat Kannada

  • 6 years ago
ರಜಪೂತ ರಾಣಿ ಪದ್ಮಾವತಿ ಕುರಿತು ತಯಾರಾಗಿರುವ ಸಿನಿಮಾ. ಪದ್ಮಾವತಿ ಚಾರಿತ್ರ್ಯಕ್ಕೆ ಧಕ್ಕೆ ಆಗಿದೆ ಎಂಬುದು ವಿವಾದಕ್ಕೆ ಕಾರಣ.

ಇತಿಹಾಸ ತಿರುಚಲಾಗಿದೆ - ರಾಜಪೂತ ಸಮುದಾಯವನ್ನು ಕೀಳಾಗಿ ಬಿಂಬಿಸಲಾಗಿದೆ

ಪದ್ಮಾವತಿ - ಅಲ್ಲಾವುದ್ದೀನ್ ಖಿಲ್ಜಿ ಮಧ್ಯೆ ಸಲ್ಲಾಪ, ರೋಮ್ಯಾಂಟಿಕ್ ದೃಶ್ಯ ಬಳಸಲಾಗಿದೆ ಎಂದು ಆರೋಪ. ಇದರಿಂದ ಭುಗಿಲೆದ್ದ ವಿವಾದ

ಪದ್ಮಾವತಿ - ಅಲ್ಲಾವುದ್ದೀನ್ ಖಿಲ್ಜಿ ಮಧ್ಯೆ ಪ್ರೇಮ ಸಲ್ಲಾಪದ ದೃಶ್ಯಗಳು ಇಲ್ಲ ಎಂದು ಚಿತ್ರತಂಡ ಸ್ಪಷ್ಟ ಪಡಿಸಿದೆ. ಆದ್ರೂ ಕರಣಿ ಸೇನಾ, ರಜಪೂತ ಸಭಾ ಒಪ್ಪುತ್ತಿಲ್ಲ.

ರಣ್ವೀರ್ ಸಿಂಗ್ (ಅಲ್ಲಾವುದ್ದೀನ್ ಖಿಲ್ಚಿ) ಹಾಗೂ ದೀಪಿಕಾ ಮಧ್ಯೆ ಯಾವುದೇ ದೃಶ್ಯ ಇಲ್ಲ ಎಂದು ರಣ್ವೀರ್ ಸಿಂಗ್ ಕೂಡ ಸ್ಪಷ್ಟ ಪಡಿಸಿದ್ದಾರೆ. ಆದ್ರೆ, ಪ್ರತಿಭಟನೆಯ ಕಾವು ಕಮ್ಮಿ ಆಗಿಲ್ಲ.

ಸೆನ್ಸಾರ್ - ಕೆಲವು ದೃಶ್ಯಗಳು ಕಟ್ ಆಗಿವೆ. ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಟೈಟಲ್ ಬದಲಾವಣೆ - ಪದ್ಮಾವತಿ ಇಂದ ಪದ್ಮಾವತ್ ಮಾಡಲಾಯ್ತು

ಗುಜರಾತ್, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನದಲ್ಲಿ 'ಪದ್ಮಾವತ್' ನಿಷೇಧ ಮಾಡಿದ್ದರು. ಅದನ್ನ ಪ್ರಶ್ನಿಸಿ ನಿರ್ಮಾಪಕ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ. ಹೀಗಾಗಿ ರಾಜಕೀಯ ತಿರುವು ಪಡೆದುಕೊಂಡ ವಿವಾದ.

ಪ್ರತಿಭಟನೆ: ದೀಪಿಕಾ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಪ್ರಾಣ ಬೆದರಿಕೆ. 5-10 ಕೋಟಿವರೆಗೆ ಬಹುಮಾನ.

ಬಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್ ಕಲಾವಿದರು ಪದ್ಮಾವತ್ ಚಿತ್ರದ ಪರ ಮಾತನಾಡಿದರು. ಚಿತ್ರ ಬಿಡುಗಡೆ ಆಗಬೇಕು ಎಂದು ಕಲಾವಿದರು ದನಿ ಎತ್ತಿದರು.

ಪದ್ಮಾವತ್ ಬಿಡುಗಡೆ ಆದರೆ ಹಿಂಸಾಚಾರ, ಲಾ ಅಂಡ್ ಆರ್ಡರ್ ತೊಂದರೆ ಆಗುತ್ತೆ ಅಂತ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇದನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಪದ್ಮಾವತ್ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಬೇಡಿ ಎಂದು ಕೋರ್ಟ್ ಹೇಳಿದೆ.

ಜನವರಿ 25 ರಿಲೀಸ್: ಅಂದೇ ಭಾರತ್ ಬಂದ್ ಮಾಡುವುದಾಗಿ ಕರಣಿ ಸೇನಾ ಹೇಳಿದೆ.

ಕರ್ನಾಟಕದಲ್ಲಿ ಪದ್ಮಾವತ್ ಚಿತ್ರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಕರ್ನಾಟಕದಲ್ಲಿ ಜನವರಿ 25 ರಂದು ಬಂದ್ - ಮಹಾದಾಯಿ ಹೋರಾಟ

ನಿರ್ದೇಶನ: ಸಂಜಯ್ ಲೀಲಾ ಬನ್ಸಾಲಿ
ತಾರಾಗಣ: ದೀಪಿಕಾ ಪಡುಕೋಣೆ, ಶಹೀದ್ ಕಪೂರ್, ರಣ್ವೀರ್ ಸಿಂಗ್

Recommended