ಪದ್ಮಾವತಿ ರಿಲೀಸ್ ಗೆ ಸೆನ್ಸಾರ್ ಮಂಡಳಿ ಒಪ್ಪಿದರೂ , ರಾಜಸ್ತಾನ ಸರ್ಕಾರ ಒಪ್ಪುತ್ತಿಲ್ಲ | Filmibeat Kannada

  • 6 years ago
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಸಿನಿಮಾದ ವಿವಾದ ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಂಕಟ ಎದುರಾಗಿದೆ. 'ಪದ್ಮಾವತಿ' ಚಿತ್ರದ ಟೈಟಲ್ ಬದಲಾಯಿಸಿ, 26 ದೃಶ್ಯಗಳಿಗೆ ಕತ್ತರಿ ಹಾಕಿದ್ರೆ, 'ಯು/ಎ' ಸರ್ಟಿಫಿಕೇಟ್ ನೀಡುವುದಾಗಿ ಷರತ್ತು ವಿಧಿಸಿದ್ದ ಸೆನ್ಸಾರ್ ಬೋರ್ಡ್ ಸಿನಿಮಾ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿತ್ತು. ಆದ್ರೀಗ, ರಾಜಾಸ್ತಾನ ಸರ್ಕಾರ ಚಿತ್ರಕ್ಕೆ ವಿಲನ್ ಆಗಿದೆ. ಹೌದು, 'ಪದ್ಮಾವತಿ'ಯಿಂದ 'ಪದ್ಮಾವತ್' ಆಗಿರುವ ಬನ್ಸಾಲಿ ಸಿನಿಮಾವನ್ನ ರಾಜಾಸ್ತಾನದಲ್ಲಿ ಬಿಡುಗಡೆ ಮಾಡದಿರಲು ರಾಜಾಸ್ತಾನದಲ್ಲಿರುವ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ರಾಣಿಪದ್ಮಾವತಿ ಬಗ್ಗೆ ಅಪಮಾನ ಮಾಡಲಾಗಿದೆ. ಇದರಿಂದ ಜನರ ಭಾವನೆಗೆ ಧಕ್ಕೆ ತರಲಿದೆ ಎಂಬ ಕಾರಣ ನೀಡಿ ಚಿತ್ರವನ್ನ ನಿ‍ಷೇಧಿಸಲು ಚಿಂತಿಸಿದೆ. ಮೂಲಗಳ ಪ್ರಕಾರ ಜನವರಿ 25 ರಂದು 'ಪದ್ಮಾವತ್' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.
Movie padmavati is constantly facing obstacles one after the other . After sensor board has agreed to let film release after changing the name . But Rajastan government has still not Ok with the movie and has decided not to let the movie release in Rajastan

Recommended