ತಮಿಳುನಾಡಿನ ಆರ್ ಕೆ ನಗರ ಫಲಿತಾಂಶ : ಮತ ಎಣಿಕೆ ಸ್ಥಗಿತ | ಇಪಿಎಸ್ ಓಪಿಎಸ್ ಬಣದ ಗಲಾಟೆ | Oneindia Kannada

  • 6 years ago
The counting of votes for the R K Nagar by-poll will be taken up on December 24, 2017. The by-poll is being seen as an acid test for Tamilnadu chief minister K.Palaniswami and deputy O. Panneerselvam. A massive fight has broken out inside the Queen Mary's college, where the counting for RK Nagar by-election is taking place.According to reports, counting was interrupted due to clashes between TTV Dinakaran and EPS-OPS supporters

ತಮಿಳುನಾಡಿನ ಆರ್.ಕೆ.ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಗುರುವಾರ ನಡೆದ ಉಪ ಚುನಾವಣೆಯಲ್ಲಿ ಶೇ 73.45ರಷ್ಟು ಮತದಾನವಾಗಿತ್ತು.ಭಾನುವಾರ ಬೆಳಗ್ಗೆ ಮರೀನಾ ಬೀಚ್ ಸಮೀಪದ ರಾಣಿ ಮೇರಿ ಕಾಲೇಜಿನಲ್ಲಿ ಉಪ ಚುನಾವಣೆ ಮತ ಎಣಿಕೆ ಆರಂಭವಾಗಿದೆ. 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.ರಾಧಾಕೃಷ್ಣನ್ ನಗರ (ಆರ್.ಕೆ.ನಗರ) ನಗರದಲ್ಲಿ ಕಳೆದ 40 ವರ್ಷಗಳಲ್ಲಿ ನಡೆದ 11 ಚುನಾವಣೆಗಳಲ್ಲಿ 7ರಲ್ಲಿ ಎಐಎಡಿಎಂಕೆ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ 59 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ 47 ಜನ ಪಕ್ಷೇತರ ಅಭ್ಯರ್ಥಿಗಳು.ಡಿಎಂಕೆಯಿಂದ ಮರುದು ಗಣೇಶನ್, ಎಐಎಡಿಎಂಕೆಯಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಸ್ಪರ್ಧೆಯಲ್ಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣದಲ್ಲಿ ಯಾವ ಅಭ್ಯರ್ಥಿಗೆ ಜಯ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಇದೀಗ ಟಿಟಿವಿ ದಿನಕರನ್ ಮುನ್ನಡೆ ಸಾಧಿಸುವಾಗ ಇಪಿಎಸ್ ಓಪಿಎಸ್ ಬಣದವರ ಗಲಾಟೆ ನಡಿದಿದ್ದು ಮತ ಎಣಿಕೆ ಸ್ಥಗಿತಗೊಂಡಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ವಾತಾವರಣ ತಿಳಿಯಾಗಿ ಮತ್ತೆ ಮತ ಎಣಿಕೆ ಶುರುವಾಗಿದೆ

Recommended