ಬೆಳಗಾವಿ : ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಗಳ ವಿವಾದಾತ್ಮಕ ಹೇಳಿಕೆ | Oneindia Kannada

  • 6 years ago
Belagavi : Basavana Bagewadi's Shivaprakash Shivacharya Swamiji gives a controversial statement by which most of the political leaders reacts on this. 'Shivaprakash swamiji is mean minded fellow, he should know his words before talking' Minister MB Patil said in Vijayapura on December 16th. He also said Mahadayi work is in progress it will complete in two years, till then no one can bring waiter from Mahadayi.


ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಅತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಪ್ರಕಾಶ ಸ್ವಾಮೀಜಿ ಒಬ್ಬ ತಲೆಕೆಟ್ಟ ಸ್ವಾಮಿಜಿ ಎಂದು ಬೈದಿದ್ದಾರೆ, ಅಷ್ಟೆ ಅಲ್ಲದೆ, ಶಿವಪ್ರಕಾಶ ಸ್ವಾಮಿಜಿಗೆ ಖಡಕ್ ವಾರ್ನಿಂಗ್ ನೀಡಿದ ಸಚಿವರು ಇನ್ನೊಮ್ಮೆ ಈ ತರಹ ಹೇಳಿಕೆ ನೀಡಿದರೆ ಉಗ್ರ ಕ್ರಮ ಕೈಕೊಳ್ಳುತ್ತೇನೆ ಎಂದರು.ಶಿವಪ್ರಕಾಶ ಹೇಳಿಕೆಯನ್ನು ಹತಾಶ ಹೇಳಿಕೆ ಎಂದ ಸಚಿವರು, ಶಿವಪ್ರಕಾಶ ಸ್ವಾಮೀಜಿಗಳು ಈ ರೀತಿಯ ಚಿಲ್ಲರೆ ಕೆಲಸ ಬಿಡಬೇಕು, ಇಲ್ಲದಿದ್ದರೆ ಎಂ.ಬಿ. ಪಾಟೀಲ ಯಾರು ಅಂತಾ ತೋರಿಸಬೇಕಾಗುತ್ತದೆ ಎಮದು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಬೇಕು ಎನ್ನುವವರ ಮನೆ ಹೆಣ್ಣುಮಕ್ಕಳು ತಮ್ಮ ಕೊರಳಲ್ಲಿಯ ತಾಳಿ, ಹಣೆ‌ ಮೇಲಿನ ಕುಂಕುಮ ಅಳಿಸಿ ನಂತರ ಹೋರಾಟ ನಡೆಸಲಿ ಎಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Recommended