ತಮಿಳುನಾಡು, ಬಿಹಾರ್ ಹಾಗು ಪಂಜಾಬ್ : ಮತಗಟ್ಟೆ ಸಮೀಕ್ಷೆ v/s ನೈಜ ಫಲಿತಾಂಶ | Oneindia Kannada

  • 6 years ago
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆಗಳು ಹೊರಬಿದ್ದಿವೆ. ಸುಮಾರು ಎಂಟಕ್ಕೂ ಹೆಚ್ಚು ಸಮೀಕ್ಷೆಗಳು ಗುಜರಾತ್ ನಲ್ಲಿ ಕೇಸರಿ ಪ್ರಭಾವ ಮುಂದುವರಿಯುತ್ತದೆ, ಹಿಮಾಚಲ ಪ್ರದೇಶದಲ್ಲೂ ಕಮಲ ಅರಳಲಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿವೆ.
ಮತಗಟ್ಟೆ ಸಮೀಕ್ಷೆಗಳು ಕರಾರುವಕ್ಕಾದ ಅಥವಾ ಅದಕ್ಕೆ ಹತ್ತಿರ ಇರುವಂತಹ ಫಲಿತಾಂಶವನ್ನು ನೀಡುತ್ತಾ? ಹೋದ ವರ್ಷದ ತಮಿಳುನಾಡು, 2017ರ ಪಂಜಾಬ್ ಮತ್ತು 2015ರಲ್ಲಿ ನಡೆದ ಬಿಹಾರದ ಅಸೆಂಬ್ಲಿ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳು ನೀಡಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ ಹೊರಬಿದ್ದ ರಿಸಲ್ಟ್ ಏನು, ನೈಜ ಫಲಿತಾಂಶ ಬಂದಿದ್ದೇನು?ಈ ಸಮೀಕ್ಷೆಗಳು ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವುದಕ್ಕೋ ಏನೋ, ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ ಐದು ಗಂಟೆಗೆ ಚುನಾವಣೆ ಮುಗಿಯುತ್ತಿದ್ದಂತೇ ಮತಗಟ್ಟೆ ವರದಿ ನೀಡಲು ಆರಂಭಿಸುತ್ತವೆ. 2015ರಲ್ಲಿ ನಡೆದ ಬಿಹಾರ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು (ಸಂಖ್ಯೆ ಸ್ವಲ್ಪ ಆಕಡೆ ಈಕಡೆ ಇರುವುದನ್ನು ಬಿಟ್ಟರೆ) ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿತ್ತು.


Comparison of Exit poll results of Tamilnadu, Punjab and Bihar assembly elections with actual results declared. Exit poll results from various media In all the three states, almost all went terribly wrong.

Recommended