ಎಗ್ಸಿಟ್ ಪೋಲ್ ಅಂದ್ರೆ ಏನು? ಈ ಸಮೀಕ್ಷೆ ಹೇಗೆ ನಡೆಯುತ್ತೆ ಗೊತ್ತಾ ? | Oneindia Kannada

  • 6 years ago
ಎಕ್ಸಿಟ್ ಪೋಲ್ ಎಂದರೆ ಮತದಾರ ಮತಹಾಕಿ ಹೊರ ಬಂದಾಗ ಆತ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನಿಂದಲೇ ತಿಳಿದುಕೊಂಡು ಅದರ ಆಧಾರದ ಮೇಲೆ ಫಲಿತಾಂಶವನ್ನು ಊಹಿಸುವುದನ್ನು ಎಗ್ಸಿಟ್ ಪೋಲ್ ಅಥವಾ ಚುನಾವಣೋತ್ತರ ಸಮೀಕ್ಷೆ ಎನ್ನಲಾಗುತ್ತದೆ. ಮಾಧ್ಯಮದವರು ಅಥವಾ ಸಮೀಕ್ಷೆ ಮಾಡುವ ಸಂಸ್ಥೆಗಳ ಸದಸ್ಯರು ಮತಗಟ್ಟೆ ಹೊರಗೆ ನಿಂತು, ಮತಹಾಕಿ ಬಂದ ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೆಂದು ಆತನನ್ನೇ ಕೇಳಿ ತಿಳಿದುಕೊಂಡು ಕೊಡುವ ಮಾಹಿತಿ ಆಧರಿಸಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಲಾಗುತ್ತದೆ.ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತಲೂ ಚುನಾವಣೋತ್ತರ ಸಮೀಕ್ಷೆಗಳು ಫಲಿತಾಂಶಕ್ಕೆ ಹೆಚ್ಚು ಹತ್ತಿರ ಇರುತ್ತವೆ ಎನ್ನಲಾಗುತ್ತದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳೂ ಎಲ್ಲಾ ಬಾರಿ ಸತ್ಯವೇನೂ ಆಗಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಬಾರಿಯ ಬಿಹಾರ ವಿಧಾನಸಭಾ ಚುನಾವಣೆ.ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಅಪಸ್ವರವೂ ಸಾಕಷ್ಟಿದೆ. ಏಕೆಂದರೆ ಸಮೀಕ್ಷೆ ನಡೆಸುವ ಸದಸ್ಯರು ಎಲ್ಲ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ಎಲ್ಲ ಮತದಾರರ ಅಭಿಪ್ರಾಯ ಸಂಗ್ರಹಿಸುವುದಿಲ್ಲ, ಹೆಚ್ಚೆಂದರೆ ಒಬ್ಬ ಸದಸ್ಯ ಐನೂರರಿಂದ ಎರಡು ಸಾವಿರ ಮತದಾರರ ಅಭಿಪ್ರಾಯ ಪಡೆದು ಅದೇ ಮಾಹಿತಿಯನ್ನು ಸಮೀಕ್ಷೆಯ ಅಂತಿಮ ವರದಿ ತಯಾರಿಸಲು ರವಾನಿಸುತ್ತಾನೆ ಎಂಬುದು ಚುನಾವಣೋತ್ತರ ಸಮೀಕ್ಷೆ ಬಗೆಗಿರುವ ಬಹುದೊಡ್ಡ ಅಪಸ್ವರ.

Ahead of Gujarath election result all eyes are on ext polls now, but how this exit polls were work, how they collect data, here is the information

Recommended