ಬೆಂಗಳೂರಿನ ಟ್ರಾಫಿಕ್ ಪೊಲೀಸರು ಸಂಗ್ರಹಿಸಿರೋ ದಾಖಲೆಯ ಫೈನ್ ಮೊತ್ತ | Oneindia Kannada

  • 6 years ago
ಬೆಂಗಳೂರು ನಮ್ಮ ಊರು . ಆದರೆ ಇಲ್ಲಿ ಸಮಸ್ಯೆಗಳು ಹಲವು . ಬೆಂಗಳೂರಿನಲ್ಲಿ ಇಲ್ಲಿನ ಹಾಗು ಹೊರ ರಾಜ್ಯದಿಂದ ಬರುವವರಿಗೆ ಕಾಡುವ ಏಕೈಕ ಸಮಸ್ಯೆ ಎಂದರೆ ಅದು ಇಲ್ಲಿನ ದಟ್ಟ್ರವಾದ ಟ್ರಾಫಿಕ್. ಟ್ರಾಫಿಕ್ ನಿಯಮ ಉಲ್ಲಂಘಿಸಿ ಅತಿ ಹೆಚ್ಚು ದಂಡ ಕಟ್ಟಿದವರಲ್ಲಿ ಬೆಂಗಳೂರಿಗರಿಗೇ ಪ್ರಥಮ ಸ್ಥಾನ ಎಂಬ ಕುಖ್ಯಾತಿ ದಕ್ಕಿದೆ. ಬೆಂಗಳೂರಿನ ವಾಹನ ಸವಾರರು ಈ ಸುದ್ದಿ ಕೇಳಿ ಮುಖ ಸಿಂದಿರಿಸಿ ಕೊಂಡಿದ್ದಾರೆ ಆದರೆ ಬೆಂಗಳೂರಿನ ಟ್ರಾಫಿಕ್ ಪೊಲೀಸರ ಮಾತ್ರ ಬಹಳ ಸಂತಸದಿಂದಿದ್ದಾರೆ . ಹಿಂದೆಂದೂ ಕಂಡುಕೇಳರಿಯದಷ್ಟು ದಂಡದ ಮೊತ್ತ ಈ ವರ್ಷ ಸಂಗ್ರಹವಾಗಿದೆ. ದಾಖಲೆಯ 102 ಕೋಟಿ ರೂ. ಟ್ರಾಫಿಕ್ ಪೊಲೀಸರ ಬೊಕ್ಕಸಕ್ಕೆ ಹರಿದು ಬಂದಿದೆ. ನವೆಂಬರ್ ತಿಂಗಳ ಅಂತ್ಯದವರೆಗೂ 92 ಕೋಟಿ ಮೊತ್ತ ಸಂಗ್ರಹವಾಗಿದ್ದು ಇನ್ನೆರೆಡು ತಿಂಗಳುಗಳಿಂದ ಒಟ್ಟು 102 ಕೋಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.

Bengaluru people have set a record new record in India by paying maximum amount of fine to city traffic police .

Recommended