ಪಾಪದ ಪಿಂಡ ಸಿದ್ದರಾಮಯ್ಯ ಅವರನ್ನ ಮುಗಿಸಿಬಿಡಿ, ಅಂದ್ರು ಅನಂತ್ ಕುಮಾರ್ ಹೆಗಡೆ | Oneindia Kannada

  • 6 years ago
"ಸಿದ್ದರಾಮಯ್ಯ ಪಾಪದ ಪಿಂಡ. ಅದು ಎಲ್ಲಿ ಹುಟ್ಟಿದೆಯೋ ಅಲ್ಲಿಯೇ ಮುಗಿಸಿ ಬಿಡಬೇಕು" ಎಂಬ ಮಾತುಗಳನ್ನಾಡುವ ಮೂಲಕ ಕೇಂದ್ರ ಕೌಶಲಾಭಿವೃದ್ಧಿಯ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಸೋಮವಾರ ಮುಖ್ಯಮಂತ್ರಿ ವಿರುದ್ಧ ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ರಾಜ್ಯ ನಾಯಕರು ಮೃದು ಧೋರಣೆಯನ್ನೇ ಇಟ್ಟುಕೊಂಡಿದ್ದರೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕೂಡ ಹೇಳಿದ್ದಾರೆ.ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಯಾರಿಗೂ ಬೇಡವಾದ ಪಾಪದ ಪಿಂಡ. ಅದನ್ನು ಕಿತ್ತೊಗೆಯದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ನಮ್ಮ ಪಕ್ಷದಲ್ಲಿ ಕೆಟ್ಟದ್ದನ್ನು ಆಡಬಾರದು, ನೋಡಬಾರದು ಹಾಗೂ ಕೇಳಬಾರದು ಎಂಬ ಮನಸ್ಥಿತಿಯಲ್ಲಿ ಹಲವರಿದ್ದಾರೆ. ಅವರು ಬದಲಾವಣೆ ಆಗಬೇಕು. ಇಲ್ಲದಿದ್ದರೆ ಅಂಥ ಹೇಡಿಗಳು ಪಕ್ಷ ಬಿಟ್ಟು ಹೋಗಲಿ ಎಂದಿದ್ದಾರೆ.ಪ್ರತಾಪ ಸಿಂಹ ಅವರನ್ನು ಬಂಧಿಸಿದ ಹಾಗೆ ಉತ್ತರ ಕನ್ನಡದ ಸಂಸದರನ್ನು ಬಂಧಿಸಿದ್ದರೆ ಇಷ್ಟು ಹೊತ್ತಿಗೆ ಇಡೀ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಅಂಥ ತಾಕತ್ತಿದೆ. ಇಂಥ ತಾಕತ್ತು ಮೈಸೂರಿನ ಬಿಜೆಪಿ ನಾಯಕರಿಗೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

'Nobody wants Siddaramaiah led Congress government in Karnataka', it has to remove, said by Central Minister and BJP leader Anant Kumar Hegde in party workers meeting in Mysuru on Monday.


Recommended