ಖಡಕ್ ಅಧಿಕಾರಿಗಳೆಂಬ ಸೋಗು ಬಿಡಿ: ಚನ್ನಣ್ಣನವರ್ ಗೆ ಸಿಂಹ ಟಾಂಗ್ | Oneindia Kannada
  • 6 years ago
ಮೈಸೂರು, ಡಿಸೆಂಬರ್ 4: ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿಯ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲವೆಂದು ಸಂಸದ ಪ್ರತಾಪ ಸಿಂಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಿಮಿನಲ್ ಕೇಸ್, ಡಿ.4 ಹುಣಸೂರು ಬಂದ್ "ಆಳುವವರ ಅಣತಿ ಮೀರುವಹಾಗಿಲ್ಲ ಅಲ್ವಾ ಸಾರ್?! ಕನಿಷ್ಠ ಖಡಕ್ ಅಧಿಕಾರಿಗಳೆಂಬ ಸೋಗು ಬಿಟ್ಟು ಆಳುವ ಪಕ್ಷದ ಆಳುಗಳು ಅನ್ನುವುದನ್ನು ಒಪ್ಪಿಕೊಳ್ಳಿ. ದತ್ತ ಜಯಂತಿಗೆ ಸಕಲ ವ್ಯವಸ್ಥೆ ಮಾಡಿರುವ ಅಣ್ಣಾಮಲೈ, ಸರ್ಕಾರವನ್ನು ಎದುರುಹಾಕಿಕೊಂಡ ಡಿಐಜಿ ರೂಪ, ಮೆಡಿಕಲ್ ಸೀಟ್ ಬ್ಲಾಕಿಂಗ್ ಹಗರಣ ತಡೆದ ಐಎಎಸ್ ರಶ್ಮಿ ನೋಡಿ ಕಲಿಯಿರಿ, ಭಾಷಣ ನಿಲ್ಲಿಸಿ" ಎಂದು ಪ್ರತಾಪ ಸಿಂಹ ಟ್ವಿಟ್ಟರ್ ನಲ್ಲಿ ಪರೋಕ್ಷವಾಗಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ವಿರುದ್ಧ ಹರಿಹಾಯ್ದರು.ಭಾನುವಾರ ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ತಡೆದು ಬಂಧಿಸಿದ್ದರು.ಇದರಿಂದ ಆಕ್ರೊಶಗೊಂಡ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಭಾನುವಾರ ರಾತ್ರಿಯೇ ಪ್ರತಾಪ ಸಿಂಹ ಅವರನ್ನು ಬಿಡುಗಡೆಗೊಳಿಸಿದರು.

Mysuru BJP MP Pratap Simha slammed SP Ravi D. Channannavar for stoped Hanuman Jayanthi celebrations in Hunsur, Mysuru district on Sunday.