News Cafe | Devotees Arrive In Huge Numbers At Mantralaya Math | HR Ranganath | Aug 12, 2022

  • 2 years ago
ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಯ 351 ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ಸಪ್ತರಾತ್ರೋತ್ಸವದ ಸಂಭ್ರಮದ ಮೊದಲ ದಿನ ಪೂರ್ವಾರಾಧನೆ ಆಚರಣೆ ಆರಂಭವಾಗಿದೆ. ಇಂದು ವಿಶೇಷವಾಗಿ ನಿರ್ಮಾಲ್ಯ ವಿಸರ್ಜನ, ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಲಿದೆ. ಬಳಿಕ ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ಜರುಗಲಿದೆ. ಸಂಜೆ ವೇಳೆಗೆ ಜ್ಞಾನಯೋಗ, ಸ್ವಸ್ತಿ ವಾಚನ, ಹಗಲು ದೀವಟಿಗೆ, ಪ್ರಾಕಾರ ಉತ್ಸವಗಳು ಜರುಗಲಿವೆ. ಸಪ್ತರಾತ್ರೋತ್ಸವ ಹಿನ್ನೆಲೆ ಏಳು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೊರೋನಾ ಬಳಿಕ ಅದ್ಧೂರಿಯಾಗಿ ಆರಾಧನೆ ನಡೆಯುತ್ತಿದ್ದು ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ದಂಡು ಹರಿದು ಬರುತ್ತಿದೆ. ಇನ್ನು ರಾಯರ ಪರಿಮಳ ಪ್ರಸಾದಕ್ಕೆ ಬೇಡಿಕೆ ಹೆಚ್ಚಿದ್ದು.. ಈಗಾಗಲೇ 3 ಲಕ್ಷ ಪ್ಯಾಕೆಟ್ ಪರಿಮಳ ಪ್ರಸಾದ ತಯಾರಾಗಿದ್ದು.. ಆರಾಧನೆ ಮಹೋತ್ಸವದ ಮುಗಿಯುವವರೆಗೂ ನಿತ್ಯ 12 ಕ್ವಿಂಟಾಲ್ ಪ್ರಸಾದ ತಯಾರಿ ಮಾಡಲಾಗ್ತಿದೆ.

#publictv #newscafe #hrranganath

Recommended