News Cafe | 'Hijab Dangal' Continues In Coastal Karnataka | June 12, 2022
  • 2 years ago
ಕರಾವಳಿಯಲ್ಲಿ ಹಿಜಬ್ ದಂಗಲ್ ಮುಂದುವರೆದಿದೆ. ಮಂಗಳೂರು ಹಂಪನಕಟ್ಟೆ ವಿವಿ ಘಟಕ ಕಾಲೇಜಿನಲ್ಲಿ ಹಿಜಬ್ ಧರಿಸಿ ಬಂದಿದ್ದ ಮೂವರು ವಿದ್ಯಾರ್ಥಿನಿಯರಿಗೆ ಶಿಸ್ತು ಉಲ್ಲಂಘಿಸಿದ್ದಕ್ಕೆ ಪ್ರಾಂಶುಪಾಲರು ನೋಟಿಸ್ ನೀಡಿದ್ರು. ಇದಕ್ಕೆ ಇಬ್ಬರು ವಿದ್ಯಾರ್ಥಿನಿಯರು ಉತ್ತರಿಸಿದ್ದು.. ಆ ಪೈಕಿ ಓರ್ವ ವಿದ್ಯಾರ್ಥಿನಿ ನಿನ್ನೆ ಹಿಜಬ್ ತೆಗೆದು ತರಗತಿಗೆ ಹಾಜರಾಗಿದ್ದಾಳೆ. ಇನ್ನೊಬ್ಬ ವಿದ್ಯಾರ್ಥಿನಿ ನೊಟೀಸ್‍ಗೆ ಉತ್ತರಿಸಿಲ್ಲ.ಹಿಜಬ್ ತೆಗೆದಿಟ್ಟು ಕ್ಲಾಸ್‍ಗೆ ಬರಲು 15 ವಿದ್ಯಾರ್ಥಿನಿಯರು ನಿರಾಕರಿಸಿದ್ದರು. ಈ ಬೆಳವಣಿಗೆಯಿಂದ ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಮೂವರು ವಿದ್ಯಾರ್ಥಿನಿಯರು ಸುದ್ದಿಗೊಷ್ಠಿ ನಡೆಸಿದ್ರು. ಇವರಿಗೆ ಕಾಲೇಜು ಆಡಳಿತ ಮಂಡಳಿಯಿಂದ ನೊಟೀಸ್ ಜಾರಿ ಮಾಡಲಾಗಿತ್ತು. ಈ ಬೆನ್ನಲ್ಲೇ ಓರ್ವ ವಿದ್ಯಾರ್ಥಿನಿ ಮನಸ್ಸು ಬದಲಿಸಿದ್ದು, ಹಿಜಬ್ ತೆಗೆದಿರಿಸಿ ಕಾಲೇಜಿಗೆ ಹಾಜರಾಗಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿನಿ ಕೂಡ ಮನಸ್ಸು ಬದಲಿಸುವ ಸಂಭವ ಇದೆ.

#publictv #hijab
Recommended