News Cafe : Revenue Department Officials Destroy Tomato Crop Grown In One Acre In Srinivaspura Taluk

  • 2 years ago
News Cafe : Revenue Department Officials Destroy Tomato Crop Grown In One Acre In Srinivaspura Taluk

#publictv #newscafe

ಈ ಅಧಿಕಾರಿಗಳು ಮಾನವೀಯತೆಯನ್ನೇ ಮರೆತು ವರ್ತಿಸ್ತಾರೆ. ಕೆರೆಯಲ್ಲಿ ಬೆಳೆ ಬೆಳೆಯಲಾಗಿದೆ ಅನ್ನೋ ಕಾರಣಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ರೈತ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಒತ್ತುವರಿ ತೆರವು ಹೆಸರಲ್ಲಿ ಕೆರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಬೆಳೆಯನ್ನ ನಾಶ ಮಾಡಿರುವ ಮನಕಲಕುವ ಘಟನೆ ಇದಾಗಿದೆ. ಶ್ರೀನಿವಾಸಪುರ ತಾಲ್ಲೂಕು ನೆರ್ನಹಳ್ಳಿ ಗ್ರಾಮದ ಶಾಂತಮ್ಮ, ಯಾರೂ ಉಪಯೋಗಿಸದ ಕೆರೆಯಲ್ಲಿ 1 ಎಕರೆ ಟೊಮ್ಯಾಟೋ ಬೆಳೆದಿದ್ದರು. ಬೆಳೆ ಬರುವವರೆಗೆ ಕಾಲಾವಕಾಶ ಕೊಡಿ ಎಂದು ಅಂಗಲಾಚಿದ್ರು ಕೇಳಿಸಿಕೊಳ್ಳದೆ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನ ಕಂದಾಯ ನಿರೀಕ್ಷಕ ವಿನೋದ್ ನಾಶ ಮಾಡಿದ್ದಾರೆ. ರೈತ ಮಹಿಳೆ ಶಾಂತಮ್ಮ ಕಣ್ಣೀರು ಹಾಕುತ್ತಿದ್ದಾರೆ.


Watch Live Streaming On http://www.publictv.in/live

Recommended