Indi Taluk Hospital Superintendent Shivananda Devaramani Takes Bribe From 12 Contract Employees
  • 2 years ago
Indi Taluk Hospital Superintendent Shivananda Devaramani Takes Bribe From 12 Contract Employees

#PublicTV #Vijayapura

ಕೋವಿಡ್ ಸಮಯದಲ್ಲಿ ಆರೋಗ್ಯ ಇಲಾಖೆ ನೌಕರರು ತಮ್ಮ ಪ್ರಾಣ ಒತ್ತೆ ಇಟ್ಟು ಕೊವಿಡ್ ಸೋಂಕಿತರಿಗಾಗಿ ಸೇವೆ ಸಲ್ಲಿಸಿದ್ರು. ಇದನ್ನ ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರ ಆರೋಗ್ಯ ಇಲಾಖೆ ನೌಕರರಿಗೆ ವಿಶೇಷ ಅನುದಾನ ನೀಡಿತ್ತು. ಇದರಲ್ಲಿ ಗುತ್ತಿಗೆ ಆಧಾರದ ಮೇಲೆ ಇದ್ದ ನೌಕರರಿಗೂ ಅವರ ಹುದ್ದೆ ತಕ್ಕಂತೆ ಅವರಿಗೆ ವಿಶೇಷ ಭತ್ಯೆ ನೀಡಿತ್ತು. ಈ ಮೂಲಕ ಕೋವಿಡ್ ಸಮಯದಲ್ಲಿ ಮಾಡಿದ ಸೇವೆಗೆ ರಾಜ್ಯ ಸರಕಾರ ಋಣ ತೀರಿಸುವ ಕೆಲಸ ಮಾಡಿತ್ತು. ಆದ್ರೆ ಈ ಭತ್ಯೆಗೂ ಕಣ್ಣು ಬಿದ್ದಿದೆ. ಯಸ್.. ವಿಜಯಪುರ ಜಿಲ್ಲೆಯ ಇಂಡಿಯ ತಾಲೂಕು ಆಸ್ಪತ್ರೆಯ ಅಧೀಕ್ಷಕ ಶಿವಾನಂದ ದೇವರಮನಿ ಲಂಚ ಪೀಕಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಒಟ್ಟು 12 ನೌಕರರ ಬಳಿ ತಲಾ 10 ಸಾವಿರದಂತೆ ಲಂಚ ತಗೊಂಡಿದ್ದಾರೆ.

2020-21ರ ಕೋವಿಡ್ ರಿಸ್ಕ್ ಅಲೌನ್ಸ್ ಹಣ ಒಬ್ಬರಿಗೆ 30 ಸಾವಿರ ರೂಪಾಯಿ ಬಂದಿತ್ತು. ಅದರಲ್ಲಿ 2 ಸಾವಿರ ರೂಪಾಯಿ ಕಟ್ ಮಾಡಿ ನೀಡಿದ್ದಲ್ಲದೇ ಉಳಿದ ಹಣ ನೀಡಲು ಪ್ರತಿಯೊಬ್ಬರಿಂದ 10 ಸಾವಿರ ರೂಪಾಯಿ ಪಡೆದಿದ್ದಾರಂತೆ ಈ ಶಿವಾನಂದ. ಸಾಲದಕ್ಕೆ ಹಣ ಮರಳಿ ಕೇಳಿದ್ದಕ್ಕೆ ಜಾತಿ ನಿಂದನೆ ಕೇಸ್ ಕೂಡ ದಾಖಲಿಸೋದಾಗಿ ಹೆದರಿಸಿದ್ದಾರೆ.

ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆಗಾಗಿ ಇಂಡಿ ಎಸಿ ಅವರ ನೇತೃತ್ವದ ತಂಡ ರಚಿಸಿ ವರದಿ ನೀಡಲು ಸೂಚಿಸಿದ್ದಾರೆ. ವರದಿ ಬಂದ ನಂತರ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಡಿಸಿ ವಿಜಯಮಹಾಂತೆಶ ಪಬ್ಲಿಕ್ ಟಿವಿಗೆ ಸ್ಪಷ್ಟ ಪಡಿಸಿದ್ದಾರೆ.

ಒಟ್ಟನಲ್ಲಿ ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಬಡ ಡಿ ದರ್ಜೆ ನೌಕರರ ಪಾಡು. ಜಿಲ್ಲೆಯ ಹಲವೆಡೆ ಈ ರೀತಿ ಆಗಿದೆ ಎಂಬ ಮಾತುಗಳಿದ್ದು, ಎಲ್ಲರಿಗು ಈಗಲಾದ್ರೂ ನ್ಯಾಯ ಸಿಗಲಿ.


Watch Live Streaming On http://www.publictv.in/live
Recommended