06 RMG IMPACT PKG_convPublic TV Impact : Tahshildar Vijay Kumar Visits Devaradoddi Village In Ramanagar

  • 2 years ago
Public TV Impact : Tahshildar Vijay Kumar Visits Devaradoddi Village In Ramanagar

#PublicTV #Ramanagar

ಆ ಗ್ರಾಮದಲ್ಲಿ ಮೌಢ್ಯತೆ ಅತಿರೇಕವಾಗಿತ್ತು. ಅಲ್ಲಿನ ಮಹಿಳೆಯರು ಆ ಕೆಟ್ಟ ಕ್ಷಣ ಬಂದ್ರೆ ಪಡಬಾರದ ಕಷ್ಟ ಪಡ್ತಿದ್ರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಅನಿಷ್ಠ ಪದ್ದತಿ ನಿವಾರಣೆಗೆ ಮುಂದಾಗಿದೆ. ಪಬ್ಲಿಕ್ ಟಿವಿ ಇಂಪ್ಯಾಕ್ಟ್ ವರದಿ ಇಲ್ಲಿದೆ.

ಆಧುನಿಕತೆ ಕಾಲದಲ್ಲೂ ಅನಾಗರಿಕತೆ, ಅನಿಷ್ಠತೆಗೆ ಸಾಕ್ಷಿಯಾದ ಮತ್ತೊಂದು ಘಟನೆ ರಾಮನಗರದಲ್ಲಿ ಬೆಳಕಿಗೆ ಬಂದಿದೆ. ರಾಮನಗರ ಜಿಲ್ಲೆಯ ದೇವರದೊಡ್ಡಿ ಗ್ರಾಮದಲ್ಲಿ ಮೌಢ್ಯತೆ ಇನ್ನೂ ಜೀವಂತವಾಗಿದೆ. ಋತುಮತಿಯಾದವರು, ಹಸಿಬಾಣಂತಿಯನ್ನು ಗ್ರಾಮದಿಂದ ಹೊರಗಿಡುವ ಅನಿಷ್ಠಪದ್ಧತಿಯನ್ನು ಈಗಲೂ ಆಚರಿಸಲಾಗ್ತಿದೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತಿದೆ. ರಾಮನಗರದ ದೇವರದೊಡ್ಡಿ ಗ್ರಾಮಕ್ಕೆ ತಹಶೀಲ್ದಾರ್ ವಿಜಯ್ ಕುಮಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಹೌದು, ದೇವರದೊಡ್ಡಿ ಗ್ರಾಮದಲ್ಲಿ ಶ್ರೀರಂಗಪ್ಪ ದೇವರಿಗಾಗಿ ಅನಿಷ್ಠಪದ್ಧತಿಯನ್ನು ಆಚರಿಸಿಕೊಂಡು ಬಂದಿದ್ರು. ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ ೨ ತಿಂಗಳು ೩ ದಿನ ಊರ ಹೊರಗಿಡಲಾಗ್ತಿತ್ತು. ಗ್ರಾಮದ ಹೊರಗೆ ಬಿದಿರಿನ ಗುಡಿಸಿಲಿನಲ್ಲಿ ಇವರು ನೋವಿನಲ್ಲೇ ದಿನಕಳಿಬೇಕಾಗಿತ್ತು. ಈ ಬಗ್ಗೆ ಬೆಳಗ್ಗೆಯಷ್ಟೇ ನಿಮ್ಮ ಪಬ್ಲಿಕ್ ಟಿವಿ ನ್ಯೂಸ್ ಕೆಫೆಯಲ್ಲಿ ವರದಿ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ ತಹಶೀಲ್ದಾರ್ ವಿಜಯ್ ಕುಮಾರ್, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ರು. ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದ್ರು.

ತಹಶೀಲ್ದಾರ್ ಜೊತೆ ಅಧಿಕಾರಿಗಳು, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಭೇಟಿ ನೀಡಿ ಮಹಿಳೆಯರು ಅನುಭವಿಸುವ ನರಕಯಾತನೆ ಬಗ್ಗೆ ಮಾಹಿತಿ ಪಡೆದ್ರು. ಇನ್ನು ಗ್ರಾಮದ ಮುಖಂಡರ ಜೊತೆ ಚರ್ಚಿಸಿದ ಅಧಿಕಾರಿಗಳು ಅನಿಷ್ಠಪದ್ಧತಿ ಸಂಪ್ರದಾಯ ಕೈಬಿಡುವಂತೆ ಮನವೊಲಿಸಿದ್ರು.

ದೇವರದೊಡ್ಡಿ ಗ್ರಾಮದಲ್ಲಿನ ಮೌಢ್ಯತೆ ಉದಾಹರಣೆ ಅಷ್ಟೇ. ಬಹುತೇಕ ಗ್ರಾಮಗಳಲ್ಲಿ ಇಂತಹ ಅನಿಷ್ಠಪದ್ದತಿ ಇನ್ನೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮೌಢ್ಯತೆಯನ್ನು ಹೋಗಲಾಡಿಸಬೇಕಿದೆ.


Watch Live Streaming On http://www.publictv.in/live

Recommended