ಸಕ್ಕರೆ ಕಾರ್ಖಾನೆ ಹೆಸರಲ್ಲಿ ಸಾಲ; ವಂಚಿಸಿದ್ರಾ ರಮೇಶ್ ಜಾರಕಿಹೊಳಿ | DK Shivakuamr | Ramesh Jarkiholi

  • 2 years ago
ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮದೇ ಒಡೆತನದ ಸಕ್ಕರೆ ಕಾರ್ಖಾನೆ ಹೆಸರಿನ ಮೇಲೆ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿರೋದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪಿಸಿದ್ದಾರೆ. ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಮೇಲೆ 600 ಕೋಟಿಗೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ. ಸಾಹುಕಾರ್‍ಗಳೆಲ್ಲಾ ದೀವಾಳಿಯಾಗಿದ್ದಾರೆ ಅಂತ ಡಿಕೆಶಿ ಆರೋಪಿಸಿದ್ದಾರೆ. ಡಿಕೆಶಿ ಆರೋಪ ಬೆನ್ನಲ್ಲೇ ಬೆಳಗಾವಿಗೆ ದೌಡಾಯಿಸಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಡಿಸಿಸಿ ಬ್ಯಾಂಕ್‍ನಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡ್ರು. ಬೆಳಗಾವಿ ಡಿಸಿಸಿ ಬ್ಯಾಂಕ್‍ನಲ್ಲಿ ರಮೇಶ್ ಜಾರಕಿಹೊಳಿ ಸಾಲ ಪಡೆದಿಲ್ಲ. ಬದಲಿಗೆ ವಿಜಯಪುರ, ತುಮಕೂರು, ಮಂಗಳೂರು, ಶಿರಸಿಯಲ್ಲಿ ಸಾಲ ಪಡೆದಿದ್ದಾರೆ ಅಂತ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಸೋಮಶೇಖರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸಾಲ ಪಡೆದಿದ್ದಾರೆ ಅಂತಾ ಟಾಂಗ್ ಕೊಟ್ರು. ಸಾಲ ತೆಗೆದುಕೊಂಡವರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‍ನವರೂ ಇದ್ದಾರೆ ಅಂತ ಹೇಳಿದ್ರು. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‍ನಿಂದ ಸಾಲ ಪಡೆದಿರೋದು ನಿಜ. ಆದ್ರೆ, ಎಲ್ಲಿಯೂ ನಾವು ಕಟ್‍ಬಾಕಿ ಉಳಿಸಿಕೊಂಡಿಲ್ಲ ಅಂತ ಸ್ಪಷ್ಟಪಡಿಸಿದ್ರು.

#PublicTV #DKShivakumar #RameshJarkiholi

Recommended