Bengaluru Gold Smith Creates World Cup In Just 0.490 Milligrams Of Gold..!
  • 3 years ago
Bengaluru Gold Smith Creates World Cup In Just 0.490 Milligrams Of Gold..!

ಬೆಂಗಳೂರು: ಕ್ರಿಕೆಟ್ ಮೇಲಿನ ಅಭಿಮಾನದಿಂದ ನಗರದ ವ್ಯಕ್ತಿಯೊಬ್ಬರು 0.490 ಮಿಲಿ ಗ್ರಾಂ ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ್ದಾರೆ.

ಶ್ರೀರಾಮಪುರದ ಕುಶಲಕರ್ಮಿ ನಾಗರಾಜ್ ರೇವಣಕರ್ 0.490 ಮಿಲಿ ಗ್ರಾಂ ಚಿನ್ನದಲ್ಲಿ ವಿಶ್ವಕಪ್ ತಯಾರಿಸಿದ್ದಾರೆ. ಈ ಬಂಗಾರದ ಕಪ್ ಅನ್ನು 1.5 ಸೆಂಟಿಮೀಟರ್ ನಲ್ಲಿ ಸುಂದರವಾಗಿ ಸಿದ್ಧಪಡಿಸಿದ್ದಾರೆ. ಈ ಕುಸುರಿ ಕಲೆ ತಯಾರಿಸಲು 2 ಸಾವಿರ ರೂ. ವೆಚ್ಚ ತಗುಲಿದೆ.

ಭಾರತದ ಕ್ರಿಕೆಟ್ ಟೀಂ ವಿಶ್ವಕಪ್ ಗೆಲ್ಲಬೇಕು ಎನ್ನುವ ಅಭಿಲಾಷೆಯೊಂದಿಗೆ ಚಿನ್ನದಲ್ಲಿ ವಿಶ್ವಕಪ್ ಅರಳಿಸಿದ್ದೇನೆ. ಟೀಂ ಇಂಡಿಯಾ ಗೆದ್ದರೆ ನಾಯಕ ವಿರಾಟ್ ಕೊಹ್ಲಿಯವರಿಗೆ ಈ ಚಿನ್ನದ ವಿಶ್ವಕಪ್ ಪ್ರತಿಕೃತಿ ನೀಡುವ ಅಭಿಲಾಷೆಯನ್ನು ನಾಗರಾಜ್ ರೇವಣಕರ್ ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿದ ನಾಗರಾಜ್, ಈ ಬಾರಿ ಭಾರತ ತಂಡ ವಿಶ್ವಕಪ್ ಗೆದ್ದು ಬರಲಿ ಎಂದು ಈ ಕಲಾಕೃತಿ ಮಾಡಿದ್ದೇನೆ. ಇದು ನನ್ನ ಮೊದಲ ಪ್ರಯತ್ನ. 0.490 ಮಿಲಿ ಗ್ರಾಂ ಇದ್ದು, 1.5 ಸೆ.ಮೀ ಇದೆ. ಭಾರತ ತಂಡ ವಿಶ್ವಕಪ್ ಗೆದ್ದ ಮೇಲೆ ನಮ್ಮ ತಂಡಕ್ಕೆ ಈ ಕಲಾಕೃತಿಯನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ಈ ಮೊದಲು ಅಂದರೆ ಭಾರತ- ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹಾಸನದ ಕ್ರಿಕೆಟ್ ಪ್ರೇಮಿಯೊಬ್ಬರು ಕೂಡ ತಮ್ಮ ಕೈಚಳಕದಿಂದ ಮೈಕ್ರೋ ವಿಶ್ವಕಪ್ ತಯಾರಿಸಿದ್ದರು. ಹಾಸನ ನಗರದ ಹೊಸಲೈನ್ ರಸ್ತೆ ನಿವಾಸಿ ನರೇಂದ್ರ ತಮ್ಮ ಕೈಚಳಕದಿಂದ ವಿಶ್ವಕಪ್‍ನ ತದ್ರೂಪಿ ಮೈಕ್ರೋ ವಿಶ್ವಕಪ್ ತಯಾರಿಸಿದ್ದರು. ಅಲ್ಲದೆ ಈ ಮೈಕ್ರೋ ವಿಶ್ವಕಪ್ ಅನ್ನು ತಂಡದ ನಾಯಕ ವಿರಾಟ್ ಕೋಹ್ಲಿಗೆ ನೀಡುತ್ತೇನೆ ಎಂದು ನರೇಂದ್ರ ಹೇಳಿದ್ದರು.

ಮೂಲತಃ ವಿಶ್ವಕರ್ಮರಾದ ನರೇಂದ್ರರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಈ ಹಿಂದೆಯೂ ಕೂಡ ಕಳೆದ ವಿಶ್ವಕಪ್‍ನಲ್ಲಿ ಬೆಳ್ಳಿಯ ವಿಶ್ವಕಪ್ ಮಾಡಿದ್ದ ನರೇಂದ್ರ ಅವರು ಈ ಬಾರಿ ಚಿನ್ನದ ಮೈಕ್ರೋ ವಿಶ್ವಕಪ್ ತಮ್ಮ ಕೈಯಾರೆ ಮಾಡಿದ್ದು, ಅತೀ ಸಣ್ಣ ಕರಕುಶಲ ಕೆಲಸ ಮಾಡಿರುವ ನರೇಂದ್ರರವರ ಈ ಕೆಲಸಕ್ಕೆ ಪತ್ನಿಯ ಶಹಬ್ಬಾಸ್‍ಗಿರಿ ಕೂಡ ಸಿಕ್ಕಿತ್ತು.
For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv
Recommended