ಹ್ಯುಂಡೈ ಕೇರ್ಸ್ 3.0 ಹೆಸರಿನ ಹೊಸ ಪರಿಹಾರ ಕ್ರಮಗಳನ್ನು ಘೋಷಿಸಿದ ಹ್ಯುಂಡೈ ಇಂಡಿಯಾ

  • 3 years ago
ಹ್ಯುಂಡೈ ಇಂಡಿಯಾ ಕಂಪನಿಯು ಹ್ಯುಂಡೈ ಕೇರ್ಸ್ 3.0 ಹೆಸರಿನ ಹೊಸ ಪರಿಹಾರ ಕ್ರಮಗಳನ್ನು ಘೋಷಿಸಿದೆ. ಈ ಹೊಸ ಪರಿಹಾರ ಕ್ರಮವು ಕರೋನಾ ವೈರಸ್ ಮಹಾಮಾರಿಯಿಂದ ಹೆಚ್ಚು ಭಾದಿತವಾಗಿರುವ ಮಹಾರಾಷ್ಟ್ರ, ದೆಹಲಿ, ಹರಿಯಾಣ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಿಗೆ ನೆರವು ನೀಡಲಿದೆ.

ಹ್ಯುಂಡೈ ಕೇರ್ಸ್ 3.0 ಅಡಿಯಲ್ಲಿ ಹ್ಯುಂಡೈ ಕಂಪನಿಯು ರೂ.20 ಕೋಟಿಗಳ ಪ್ಯಾಕೇಜ್ ಘೋಷಿಸಿದೆ. ಇದರ ಅಡಿಯಲ್ಲಿ ಕಂಪನಿಯು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲಿದೆ.

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದೆ. ಹ್ಯುಂಡೈ ಕಂಪನಿಯು ಸ್ಥಾಪಿಸಲಿರುವ ಆಮ್ಲಜನಕ ಉತ್ಪಾದನಾ ಘಟಕಗಳು ಆಮ್ಲಜನಕದ ಕೊರತೆಯನ್ನು ನೀಗಿಸಲಿವೆ.

Recommended