ಪಾರಿಜಾತ ಹೂವಿನ ಮಹತ್ವ, ಔಷಧೀಯ ಗುಣಗಳು | Parijat Flower Benefits And Medicinal Uses | Boldsky Kannada
  • 4 years ago
ಭೂಮಿ ಪೂಜೆಯಲ್ಲಿ ಪವಿತ್ರವಾದ ಪಾರಿಜಾತ ಹೂ ಗಿಡವನ್ನು ನೆಡಲಾಗಿದೆ. ನಮ್ಮ ತತ್ತ್ವ ಶಾಸ್ತ್ರದಲ್ಲಿನ ಪಾರಿಜಾತ ಗಿಡಕ್ಕೆ ಎಲ್ಲಿಲ್ಲದ ಮಹತ್ವವಿದೆ. ಸಮುದ್ರ ಮಥನ ಕಾಲದಲ್ಲಿ ಸುರಭಿ, ವಾರಣಿಯ ನಂತರ ಜನಿಸಿದ್ದು ಪಾರಿಜಾತ ಎಂಬ ಕತೆಯಿದೆ. ಕ್ಷೀರ ಸಮುದ್ರದಿಂದ ಹುಟ್ಟಿದ 5 ಕಲ್ಪ ವೃಕ್ಷಗಳಲ್ಲಿ ಇದೂ ಕೂಡ ಒಂದು. ಕಲ್ಪ ವೃಕ್ಷ ಹಾಗೂ ಕಾಮಧೇನುವನ್ನು ಋಷಿಗಳಿಗೆ ಕೊಟ್ಟ ಇಂದ್ರ, ಇಂದ್ರಾಣಿಗಾಗಿ ಪಾರಿಜಾತ ವೃಕ್ಷವನ್ನು ತನ್ನ ನಂದನವನಕ್ಕೆ ಕೊಂಡೊಯೊದ್ದ. ಕೃಷ್ಣನಿಗೆ ತುಂಬಾ ಪ್ರಿಯವಾದ ಗಿಡ ಪಾರಿಜಾತ. ಕೃಷ್ಣ ಇಂದ್ರ ಲೋಕದಿಂದ ಪಾರಿಜಾತ ಗಿಡವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕತೆಯಿದೆ. ಪಾರಿಜಾತ ಹೂವನ್ನು ತಿಳುವಳಿಕೆ ಹಾಗೂ ಜ್ಞಾನದ ಸಂಕೇತ ಎನ್ನುತ್ತಾರೆ. ಈ ಹೂವಿನ ಕಂಪು ಮೂಗಿಗೆ ತುಂಬಾ ಹಿತ, ಈ ಹೂ ಸೂರ್ಯ ಮುಳುಗಿದ ನಂತರ ಅರಳುವುದರಿಂದ ಇದನ್ನು ನೈಟ್ ಜಾಸ್ಮಿನ್‌ ಎಂದು ಕೂಡ ಕರೆಯಲಾಗುವುದು. ಇದನ್ನು ದೇವ ಪುಷ್ಮ ಎಂದು ಕರೆಯಲಾಗುವುದು.

#Parijat #Parijata #nightjasmine
Recommended