ತಮಿಳು ಖ್ಯಾತ ನಟನ ಜೊತೆ ಕೆಜಿಎಫ್ ಬೆಡಗಿ ನಿಶ್ಚಿತಾರ್ಥ..!

  • 4 years ago
#srinidhishetty #chiyanvikram #kgf2


ಕೆಜಿಎಫ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ಬೆಡಗಿ ಅಂದ್ರೆ ಅದು ಶ್ರೀ ನಿಧಿ ಶೆಟ್ಟಿ, ಇನ್ನು ಕೆಜಿಎಫ್ ಸಿನಿಮಾ ಸಕ್ಸಸ್ ಬೆನ್ನಲ್ಲೇ ಕನ್ನಡದಲ್ಲಿ ಅಷ್ಟೇ ಅಲ್ಲದೇ ತಮಿಳು,ತೆಲುಗಿನಲ್ಲೂ ಸಾಕಷ್ಟು ಆಫರ್‍ಗಳು ಬಂದ್ರು, ಶ್ರೀ ನಿಧಿ ಶೆಟ್ಟಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ, ಅಷ್ಟೇ ಅಲ್ಲದೇ ಕೆಜಿಎಫ್ 2 ಸಿನಿಮಾ ಮುಗಿಯುವ ವರೆಗೂ ಯಾವುದೇ ಸಿನಿಮಾಗೆ ಸಹಿ ಹಾಕುವುದಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು, ಆದ್ರೆ ಈಗ ಶ್ರೀ ನಿಧಿ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಮತ್ತು ಸಿನಿರಸಿಕರಿಗೆ ದೊಡ್ಡ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಹೌದು ತಮಿಳಿನ ಸ್ಟಾರ್ ನಟನ ಜೊತೆ ಸಪ್ತಪದಿ ತುಳಿಯು ಸಜ್ಜಾಗಿದ್ದಾರೆ. ಆಶ್ಚರ್ಯ ಆಗ್ತಿದ್ಯಾ, ಹೌದು ಇದು ನೂರಕ್ಕೆ ನೂರು ಸತ್ಯ, ಆದ್ರೆ ಅವ್ರ ಮದುವೆ ಆಗ್ತಾ ಇರೋದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ.

ಕಾಲಿವುಡ್‍ನ ಸೂಪರ್ ಸ್ಟಾರ್ ಚಿಯಾನ್ ವಿಕ್ರಂ ನಾಯನಾಗಿ ನಟಿಸ್ತಾ ಇರೋ ಕೋಬ್ರಾ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಾ ಇದ್ದಾರೆ. ಆ ಚಿತ್ರದ ಸಾಂಗ್ ಒಂದು ರಿಲೀಸ್ ಆಗ್ತಾ ಇದ್ದು, ಆ ಹಾಡು ನಾಯಕ ಮತ್ತು ನಾಯಕಿ ಎಂಗೆಜ್‍ಮೆಂಟ್ ಸೀನ್ ಆಗಿದೆಯಂತೆ, ಹೀಗಾಗಿ ಆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಆಹ್ವಾನ ಪತ್ರಿಕೆ ರೆಡಿಮಾಡಿದ್ದು, ಅದರಲ್ಲಿ ಶ್ರೀನಿಧಿ ಶೆಟ್ಟಿ ಮತ್ತು ಚಿಯಾನ್ ವಿಕ್ರಮ್ ಅವ್ರ ಫೋಟೋ ಇದ್ದು ಎಂಗೇಜ್‍ಡ್ ಅಂತ ಬರೆದಿದೆ, ಸದ್ಯ ಈ ಫೋಟೋ ನೋಡಿದ ಅಭಿಮಾನಿಗಳು ಶ್ರೀನಿಧಿ ಮದುವೆ ಆಗ್ತಾ ಇದ್ದಾರೆ ಅಂತ ತಿಳಿದುಕೊಂಡಿದ್ದು ಈ ಆಮಂತ್ರಣ ಪತ್ರಿಗೆ ಸದ್ಯ ಸಖತ್ ವೈರಲ್ ಕೂಡ ಆಗಿದೆ. ಇನ್ನು ಇದೇ ಜೂನ್ 29ರಂದು ಕೋಬ್ರಾ ಚಿತ್ರದ ಸಾಂಗ್ ರಿಲೀಸ್ ಆಗ್ತಾ ಇದ್ದು, ಅದರ ವಿಶೇಷವಾಗಿ ಈ ಆಮಂತ್ರಣ ಪತ್ರಿಕೆಯನ್ನು ರೆಡಿಮಾಡಲಾಗಿದೆ.

Recommended