ಬಿಡುಗಡೆಯಾಯ್ತು ಚಿರುಗೆ ಬ್ರೇಕ್ ನೀಡಬೇಕಿದ್ದ ಸಿನಿಮಾದ ಹಾಡು. | Chiranjeevi Sarja | Hari Santosh

  • 4 years ago
ಐದಾರು ವರ್ಷಗಳ ಹಿಂದೆಯೇ ಚಿರಂಜೀವಿ ಸರ್ಜಾಗೆ ಸಿಕ್ಕಿದ್ದ ಕಥೆಯೊಂದನ್ನು ಬಹಳ ಮೆಚ್ಚಿಕೊಂಡಿದ್ದರು. ಆ ಚಿತ್ರವನ್ನು ಮಾಡಲೇಬೇಕು ಎಂದು ಉತ್ಸುಕರಾಗಿದ್ದರು. ಈ ಚಿತ್ರ ತಮ್ಮ ವೃತ್ತಿ ಬದುಕನ್ನು ಬದಲಿಸಲಿದೆ ಎಂದು ನಿರೀಕ್ಷಿಸಿದ್ದರು. 'ಅಲೆಮಾರಿ' ಖ್ಯಾತಿಯ ಹರಿ ಸಂತೋಷ್ ಈ ಸಿನಿಮಾ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸೆಟ್ಟೇರಲೇ ಇಲ್ಲ. ಆಗಲೇ ಆ ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದ ಸಂತೋಷ್, ಅದನ್ನು ಟ್ರೇಲರ್ ರೂಪದಲ್ಲಿ ಸಿದ್ಧಪಡಿಸಿದ್ದರು. ಈಗ ಚಿರಂಜೀವಿ ಅಗಲಿಕೆಯ ನೋವಲ್ಲಿ ಆ ಹಾಡನ್ನು ಅವರು ಹಂಚಿಕೊಂಡಿದ್ದಾರೆ.

Director Hari Santhosh said he and Chiranjeevi Sarja was supposed to do political rowdism movie Doddoru. He dedicated a trailer song for him.

Recommended