Don't Do These Things While Making A Mask At Home And Wearing It | Boldsky Kannada

  • 4 years ago
ಭಾರತವು ಕೊರೊನಾವೈರಸ್‌ ಸೋಂಕು ತಡೆಗಟ್ಟಲು ಹಂತ-ಹಂತವಾಗಿ ಪ್ರಯತ್ನಿಸುತ್ತಿದೆ. ಕೋವಿಡ್ 19 ಎಂಬ ಸಾಂಕ್ರಾಮಿಕ ಪಿಡುಗು ಇಟಲಿಯಲ್ಲಿ ರಣಕೇಕೆ ಹಾಕಿ, ಇಟಲಿ, ಸ್ಪೇನ್ ಅನ್ನು ನರಕವಾಗಿಸಿ ಭಾರತಕ್ಕೆ ಕಾಲಿಟ್ಟಾಗ ಎಚ್ಚೆತ್ತುಕೊಂಡ ನಮ್ಮ ಪ್ರಧಾನಿ ಮೋದಿಯವರು ಮೊದಲಿಗೆ ಒಂದು ದಿನದ ಜನತಾ ಕರ್ಫ್ಯೂ ಮಾಡುವಂತೆ ಸೂಚಿಸಿದರು. ಅದಾದ ಬೆನ್ನಲ್ಲೇ ದೇಶವು 21 ದಿನಗಳ ಲಾಕ್‌ಡೌನ್‌ನಲ್ಲಿ ಇರಬೇಕೆಂಬ ಕಟ್ಟು ನಿಟ್ಟಿನ ಆದೇಶ ಹೊರಡಿಸಿದರು. ಕೊರೊನಾವೈರಸ್ ವಿರುದ್ಧ ವೈದ್ಯರು, ನರ್ಸ್‌ಗಳು ಹಾಗೂ ಇತರ ವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಪೊಲೀಸ್ ಇಲಾಖೆ ಇವರೆಲ್ಲಾ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ಈಗಾಗಲೇ ಕೆಲವೊಂದು ನರ್ಸ್‌, ವೈದ್ಯರು ಹಾಗೂ ಪೊಲೀಸರಿಗೆ ಸೋಂಕು ತಗುಲಿದೆ. ಜನರ ಹಿತಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿರುವ ಇವರ ಸೇವೆಯನ್ನು ಅಭಿನಂದಿಸಿಲು ಜನತಾ ಕರ್ಫ್ಯೂ ದಿನ ಚಪ್ಪಾಳೆ ತಟ್ಟಲು ಹೇಳಿದರು. ಲಾಕ್‌ಡೌನ್‌ನಲ್ಲಿರುವಾಗ ಜನರಲ್ಲಿ ಮನೋಬಲ ತುಂಬುವ ಸಲುವಾಗಿ ಏಪ್ರಿಲ್ 5ರಂದು ರಾತ್ರಿ 9 ಗಂಟೆ 9 ನಿಮಿಷದವರೆಗೆ ದೀಪ ಹಚ್ಚಲು ಸೂಚಿಸಿದರು. ಕೊರೊನಾವೈರಸ್‌ ವಿರುದ್ಧ ಹೋರಾಟದಲ್ಲಿ ಜನರು ಕೈ ಜೋಡಿಸಿದ್ದಾರೆ. ಇದೀಗ ಮೋದಿಯವರು ಜನರಿಗೆ ಮತ್ತೊಂದು ಕೆಲಸ ನೀಡಿದ್ದಾರೆ. ಅದುವೇ ನೀವೇ ಮಾಸ್ಕ್‌ ತಯಾರಿಸಿ, ಅದನ್ನು 5 ಜನರಿಗೆ ಗಿಫ್ಟ್ ನೀಡಿ ಎಂದಿದ್ದಾರೆ.

ಕೊರೊನಾ ವೈರಸ್ ಎಂಬ ಸೋಂಕು ದಿನದಿಂದ ದಿನ ಹೆಚ್ಚುತ್ತಿರುವಾಗ ನಾವು ನಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಸ್ವಲ್ಪ ಯಾಮಾರಿದರೂ ತೊಂದರೆ ತಪ್ಪಿದ್ದಲ್ಲ. ಮನೆಯಲ್ಲಿ ಒಬ್ಬನಿಗೆ ಬಂದರೆ ಆ ಮನೆಯ ಸದಸ್ಯರು ಹಾಗೂ ಆತನ ಸಂಪರ್ಕದಲ್ಲಿರುವವರಿವಗೆ ಅಪಾಯ ಇರುವುದರಿಂದ ಸೋಂಕು ತಡೆಗಟ್ಟಲು ಮಾಸ್ಕ್ ಧರಿಸುವುದು ಪರಿಣಾಮಕಾರಿ ವಿಶ್ವ ಆರೋಗ್ಯ ತಜ್ಞರು ಹೇಳಿದ್ದಾರೆ. ಕೆಲವು ದೇಶಗಳಲ್ಲಿ ಈಗಾಗಲೇ ಮಾಸ್ಕ್‌ಗಳಿಗೆ ಕೊರತೆ ಉಂಟಾಗಿದೆ. ಕೊರೊನಾ ಸೋಂಕಿತರನ್ನು ಚಿಕಿತ್ಸೆ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೇ ಮಾಸ್ಕ್‌ ಕೊರತೆ ಉಂಟಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಸ್ಪತ್ರೆಗಳಲ್ಲಿ ಬಳಸುವ ಸರ್ಜಿಕಲ್ ಮಾಸ್ಕ್‌ಗಳನ್ನು ಜನರು ಕೊಂಡು ಬಳಸುತ್ತಿರುವುದು.

Recommended