Make-Up Tips For Contact Lens Wearers | Boldsky Kannada
  • 4 years ago
ಕಾಂಟ್ಯಾಕ್ಟ್ ಲೆನ್ಸ ಗಳು ಕನ್ನಡಕಕ್ಕೆ ಒಂದು ಉತ್ತಮ ಪರ್ಯಾಯವಾಗಿದೆ. ಇದು ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸುತ್ತದೆ. ದಿನಪೂರ್ತಿ ಕನ್ನಡಕವನ್ನೇ ಧರಿಸಿರುವುದು ತುಂಬಾ ಕಿರಿಕಿರಿ ಎನಿಸುತ್ತದೆ. ಕನ್ನಡಕ ಧರಿಸೇ ಇದ್ದರೆ, ಕಣ್ಣಿನ ಕೆಳಗೆ ಕಲೆಗಳೂ ಆಗಬಹುದು. (ಡಾರ್ಕ್ ಸರ್ಕಲ್ಸ್) ಹಾಗಾಗಿ ಸಾಕಷ್ಟು ಮಹಿಳೆಯರು ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸುವುದನ್ನು ನೋಡಿದ್ದೇವೆ. ಕಾಂಟ್ಯಾಕ್ಟ್ ಲೆನ್ಸ್ಗಳು ನಿಮ್ಮ ಕೆಲಸವನ್ನು ತುಂಬಾ ಸುಲಭವಾಗಿಸುತ್ತದೆಯಾದರೂ, ನೀವು ಅವುಗಳನ್ನು ಧರಿಸಿದಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಯಮಿತವಾಗಿ ಮೇಕಪ್ ಧರಿಸುವವರಿಗಂತೂ ಇದು ಬಹಳ ಮುಖ್ಯವಾಗುತ್ತದೆ. ಕಾರಣವೆಂದರೆ, ನೀವು ಲೆನ್ಸ್ ಗಳನ್ನು ಧರಿಸಿ ಮೇಕಪ್ ಮಾಡಿದರೆ ನಿಮ್ಮ ಲೆನ್ಸ್ ಸುಲಭವಾಗಿ ಕೊಳಕುಗೊಳಿಸಬಹುದು ಮತ್ತು ನೀವು ಮೇಕಪ್ ಅನ್ನು ತಪ್ಪು ರೀತಿಯಲ್ಲಿ ಮಾಡುವ ಮೂಲಕ ನಿಮ್ಮ ಕಣ್ಣುಗಳಿಗೆ ತೊಂದರೆಯಾಗಬಹುದು. ಹಾಗಂದ ಮಾತ್ರಕ್ಕೆ ಲೆನ್ಸ್ ಧರಿಸುವವರು ಮೇಕಪ್ ಮಾಡಲೇ ಬಾರದೇ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲ. ಖಂಡಿತವಾಗಿಯೂ ನೀವು ಮೇಕಪ್ ಮಾಡಬಹುದು. ನಿಮಗಿಷ್ಟವಾದ ಬಣ್ಣದ ಐ ಶ್ಯಾಡೋ, ಐ ಲೈನರ್ ಬಳಸಬಹುದು. ಆದರೆ ಅದನ್ನೆಲ್ಲಾ ಬಳಸುವುದಕ್ಕಿಂತ ಮೊದಲು ಕೆಲವು ಮುಂಜಾಗರೂಕತೆಗಳು ಅಗತ್ಯ. ಆದ್ದರಿಂದ, ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಪ್ರಮುಖವಾದ, ಅಗತ್ಯವಾದ ಕಣ್ಣಿನ ಮೇಕಪ್ ಸಲಹೆಗಳು ಇಲ್ಲಿವೆ.
Recommended