ಅಲೋವೆರಾ ಫೇಸ್ ಪ್ಯಾಕ್ | Aloe Vera Face Pack | Boldsky
  • 5 years ago
ಅಲೋವೆರಾ (ಲೋಳೆಸರ) ಎಂಬ ಈ ಅದ್ಭುತ ಗಿಡದ ಬಗ್ಗೆ ಈಗಾಗಲೇ ಬಹಳಷ್ಟು ಕೇಳಿದ್ದೇವೆ. ನಮ್ಮ ಆಯುರ್ವೇದದಲ್ಲಿಯೇ ಅಲ್ಲ ಪ್ರಾಚೀನ ಈಜಿಪ್ಚಿಯನ್ನರು ಕೂಡ ಈ ಗಿಡದ ಅಭಿಮಾನಿಗಳು ಆಗಿದ್ದರು. ಈ ಗಿಡವನ್ನು ಅವರು "ಅಮರತ್ವದ ಗಿಡ" ಎಂದು ಕರೆಯುತ್ತಿದ್ದರು. ಅಲೋವೇರ ಗಿಡದ ಔಪಚಾರಿಕ ಹಾಗೂ ಗುಣಪಡಿಸುವ ಶಕ್ತಿ ಈ ಗಿಡವನ್ನು ಹಾಗೆ ಕರೆಯಲು ಒಂದು ಮುಖ್ಯ ಕಾರಣ. ಈ ಗಿಡವನ್ನು ನಾವು ನಮ್ಮ ಮನೆಗಳಲ್ಲಿ, ಬಾಲ್ಕನಿಯಲ್ಲಿ, ಅಂಗಳದಲ್ಲಿ ಬಹಳ ಸುಲಭವಾಗಿ ಬೆಳೆಸಬಹುದು. ಇದರಿಂದ ನಮಗೆ ಇದು ಕೈಗೆ ಎಟುಕುವಂತೆಯೇ ಇದ್ದು ಬೇಕೆಂದಾಗ ಬಳಸಲು ಬಹಳ ಅನುಕೂಲ. ಅದರಲ್ಲೂ ಸೌಂದರ್ಯದ ವಿಷಯದಲ್ಲಿ ಅಂತೂ ಎತ್ತಿದ ಕೈ! ಹೌದು, ಚರ್ಮದ ಆರೈಕೆಯ ವಿಷಯ ಬಂದಾಗ ನಿಸರ್ಗದಲ್ಲಿರುವ ಕೆಲವು ಸಸ್ಯಗಳು ಅದ್ಭುತವಾದ ಆರೈಕೆ ನೀಡುತ್ತವೆ. ಅಲೋವೆರಾ ಅಥವಾ ಲೋಳೆಸರ ಇದರಲ್ಲಿ ಪ್ರಮುಖವಾದ ಸಸ್ಯವಾಗಿದೆ. ಚರ್ಮದ ಆರೈಕೆಗೆ ಬೇಕಾದ ಪೋಷಕಾಂಶಗಳಲ್ಲಿ ಬಹಳಷ್ಟು ಇದರಲ್ಲಿರುವುದೇ ಈ ಪಟ್ಟ ಸಿಗಲು ಕಾರಣವಾಗಿದೆ. ಚರ್ಮದಲ್ಲಿ ಇದುವರೆಗೆ ಇದ್ದ ಹಳೆಯ ಕಲೆಯನ್ನು ನಿವಾರಿಸುವುದರ ಜೊತೆಗೇ ವೃದ್ಧಾಪ್ಯಕ್ಕೆ ಕಾರಣವಾಗುವ ನೆರಿಗೆ ಮೊದಲಾದ ತೊಂದರೆಗಳಿಂದ ರಕ್ಷಿಸುವುದರ ಮೂಲಕ ತಾರುಣ್ಯವನ್ನು ಬಹಳ ವರ್ಷಗಳಿಗೆ ಹೆಚ್ಚಿಸಲು ಸಹಾ ಇದು ನೆರವಾಗಬಲ್ಲದು. ಸಾಮಾನ್ಯವಾಗಿ ಮೊಡವೆ ಒಣಗಿದ ಬಳಿಕ ಉಳಿದ ಕಲೆ, ಚಿಕ್ಕಪುಟ್ಟ ಗಾಯಗಳು, ಸುಟ್ಟ ಗಾಯ, ನೆರಿಗೆ ಮೊದಲಾದ ಚರ್ಮದ ತೊಂದರೆಗಳಿಗೆ ಲೋಳೆಸರ ಅತ್ಯುತ್ತಮವಾದ ಪರಿಹಾರವಾಗಿದೆ.
Recommended