ಮುಖದ ಮೇಲಿನ ನೆರಿಗೆ ಹಾಗೂ ಕಲೆಗಳನ್ನು ಹೋಗಲಾಡಿಸಲು ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ | Boldsky

  • 6 years ago
ತ್ವಚೆಯ ಹಲವಾರು ತೊಂದರೆಗಳಿಗೆ ತ್ವಚೆಯ ಆರೈಕೆಯ ಕೊರತೆಯೇ ಆಗಿದೆ. ಕಲೆಗಳು, ಮೊಡವೆ, ಕಪ್ಪುತಲೆ, ಬಿಳಿತಲೆ, ಬಣ್ಣ ಬಿಳಿಚಿರುವುದು ಮೊದಲಾದವು ಈ ನಿರ್ಲಕ್ಷ್ಯದಿಂದ ಎದುರಾಗಬಹುದು. ಹಾಗಾಗಿ ತ್ವಚೆಯ ಆರೋಗ್ಯವನ್ನು ಕಾಪಾಡಲು ಕೆಲವಾರು ಆರೈಕೆಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಹಾಗೂ ಇದರಲ್ಲಿ ಫೇಶಿಯಲ್ ಅಥವಾ ಮುಖದ ಚರ್ಮದ ಆರೈಕೆ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಸೂಕ್ತ ಫೇಶಿಯಲ್ ನಿಂದ ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಬಹುದು. ಅದಕ್ಕೆಂದೇ ಇಂದು ನಾವು ಒಂದು ಸರಳ ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ ನ ಮಹತ್ವದ ಬಗ್ಗೆ ತಿಳಿಸಲಿದ್ದೇವೆ. ಸಾಮಾನ್ಯವಾಗಿ ಅಕ್ಕಿಯನ್ನು ಬೇಯಿಸಿದ ಬಳಿಕ ಸೋಸಿದ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ. ಅಂತೆಯೇ ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಬಳಸುವುದರಿಂದಲೂ ಹಲವಾರು ಪ್ರಯೋಜನಗಳಿವೆ. ಹಿಂದಿನ ಕಾಲದಲ್ಲಿ ಸೌಂದರ್ಯ ವರ್ಧಕವಾಗಿ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೇ ಕೋಮಲತೆಯನ್ನೂ ನೀಡುತ್ತದೆ. ಆದರೆ ಅಕ್ಕಿಹಿಟ್ಟನ್ನು ಸುಮ್ಮನೇ ರೊಟ್ಟಿ ತಟ್ಟಿದಂತೆ ಮುಖಕ್ಕೆ ಹಚ್ಚಿಕೊಂಡರೆ ಸಾಲದು. ಇದರ ಸರಿಯಾದ ಬಳಕೆಯ ವಿಧಾನವನ್ನು ವಿಡಿಯೋದಲ್ಲಿ ನೀಡಿದ್ದೇವೆ

Recommended