ತುಟಿಯ ಸೌಂದರ್ಯ ಹೆಚ್ಚಿಸುವ ಬೀಟ್‌ರೂಟ್ ಲಿಪ್ ಬಾಮ್ | Boldsky
  • 6 years ago
ಮನುಷ್ಯನ ದೇಹದ ಸೌಂದರ್ಯ ಕಂಡುಬರುವುದು ಮುಖದಲ್ಲಿ. ಮುಖದ ಮೇಲಿನ ಪ್ರತಿಯೊಂದು ಅಂಗವು ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣುಗಳು, ಮೂಗು, ಹಣೆ ಹೀಗೆ ಪ್ರತಿಯೊಂದು ಸರಿಯಾಗಿದ್ದರೆ ಮಾತ್ರ ಸೌಂದರ್ಯ ಕಂಡುಬರುವುದು. ಇಲ್ಲವಾದಲ್ಲಿ ಮುಖವು ವಿಕಾರವಾಗಿ ಕಾಣಿಸುವುದು. ಅದರಲ್ಲೂ ತುಟಿಗಳು ಮುಖದ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೃದು ಹಾಗೂ ಸುಂದರ ತುಟಿಗಳು ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಮಹಿಳೆಯರ ಸೌಂದರ್ಯವು ತುಟಿಗಳಲ್ಲೇ ಅಡಗಿರುವುದು. ತುಟಿಗಳು ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳು ಸಿಗುವುದು. ಆದರೆ ಅತಿಯಾಗಿ ಇಂತಹ ಉತ್ಪನಗಳನ್ನು ಬಳಸುವುದರಿಂದ ತುಟಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ತುಟಿಗಳು ತಮ್ಮ ಸೌಂದರ್ಯವನ್ನು ಕಳೆದುಕೊಂಡರೆ ಅದಕ್ಕಿಂತ ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವೊಂದು ಕಾಸ್ಮೆಟಿಕ್ ಗಳ ಬಳಕೆ ನಿಲ್ಲಿಸಬೇಕು. ಇದರ ಬದಲು ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸಬಹುದು ಬೀಟ್‌ರೂಟ್ ಲಿಪ್ ಬಾಮ್! ಹೌದು, ಬೀಟ್‌ರೂಟ್ ರಸ ಹಾಗೂ ಜೇನು ಬಳಸಿ ಮಾಡುವ ಈ ಬೀಟ್‌ರೂಟ್ ಲಿಪ್ ಬಾಮ್ ನಿಮ್ಮ ತುಟಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ..
Recommended