ನಿರೂಪಕ ಚಂದನ್ ಸಾವಿನಿಂದ ಆಘಾತಕ್ಕೆ ಒಳಗಾದ ಪತ್ನಿಯಿಂದ ಅನಾಹುತ | Filmibeat Kannada

  • 6 years ago
Anchor Chandan (who died at an road accident recently) wife Meena kills her 13 year old son Tushar and attempts to commit suicide today morning (May 31st) at Doddaballapur.

ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದ ಖ್ಯಾತ ನಿರೂಪಕ ಚಂದನ್ ಇತ್ತೀಚೆಗಷ್ಟೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದರು. ಮೇ 24 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಚಂದನ್ ಮೃತಪಟ್ಟಿದ್ದರು. ಚಂದನ್ ಇಹಲೋಕ ತ್ಯಜಿಸಿದ ಒಂದು ವಾರದಲ್ಲಿಯೇ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಪತಿ ಚಂದನ್ ದೂರವಾದ ಬೇಸರದಲ್ಲಿ ಇಂದು ಬೆಳಗ್ಗೆ ಪತ್ನಿ ಮೀನಾ ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಾಲದಕ್ಕೆ ಪುತ್ರ ತುಷಾರ್ ಕತ್ತು ಸೀಳಿ ಹತ್ಯೆಗೈದಿದ್ದಾರೆ.

Recommended