ಶ್ರೀದೇವಿ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಯಲು ಮಾಡಿದ ಭಯಾನಕ ಸುದ್ದಿ | Oneindia Kannada

  • 6 years ago
Actress Sridevi did not die of heart attack. Then how did she die? As per forensic report, the 'Chandini' fame actress accidentally fell and drowned in the bath tub in hotel she was staying in. It also says she was in influence of alcohol.


ಬಾಲಿವುಡ್ ಬೆಡಗಿ, ಚಿತ್ರರಸಿಕರ ಸಾಮ್ರಾಜ್ಞಿ ಶ್ರೀದೇವಿ ನಿಜವಾಗಿಯೂ ಸತ್ತಿದ್ದು ಹೇಗೆ? ಈ ಬಗ್ಗೆ ಹಲವಾರು ಕಪೋಲಕಲ್ಪಿತ ಸುದ್ದಿಗಳು ಇಂಟರ್ನೆಟ್ಟಿನಲ್ಲಿ ಹರಿದಾಡುತ್ತಿದ್ದವು. ಆದರೆ, ಇದೀಗ ಪೋಸ್ಟ್ ಮಾರ್ಟಂ ರಿಪೋರ್ಟ್ ಹೊರಬಿದ್ದಿದ್ದು, ನಿಜಕ್ಕೂ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿವೆ. ಆರಂಭಿಕ ಮಾಹಿತಿಯ ಪ್ರಕಾರ, ಶ್ರೀದೇವಿ ಅವರು ತೀವ್ರ ಹೃದಯಾಘಾತದಿಂದ ಸತ್ತಿದ್ದರು ಎಂದು ಹೇಳಿತ್ತು. ಆದರೆ, ಅವರಿಗೆ ಹೃದಯ ಬೇನೆಯ ಸುಳಿವೂ ಇರಲಿಲ್ಲ. ಹೃದಯಬೇನೆ ಇಲ್ಲದಿದ್ದರೂ ಹೃದಯಾಘಾತ ಆಗಬಾರದೆಂದೇನಿಲ್ಲ. ಆದರೆ, ಅವರು ನಿಜಕ್ಕೂ ಸತ್ತಿದ್ದು ಹೃದಯಾಘಾತದಿಂದಲ್ಲವೆ? ಈ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಏನನ್ನೂ ಹೇಳುವುದಿಲ್ಲ. ಹಾಗಿದ್ರೆ ಹೇಗೆ?

Recommended