ರಾಹುಲ್ ಗಾಂಧಿ ಜಾಕೆಟ್ ಬೆಲೆ ಎಷ್ಟಿರಬಹುದು ಊಹಿಸಿ | Oneindia Kannada

  • 6 years ago
The Bharatiya Janata Party (BJP) on Tuesday took a potshot at Congress president Rahul Gandhi after he was seen wearing a black jacket, costing nearly Rs 70,000. The BJP spent no time and its Meghalaya unit highlighted it on the Twitter with a photo of Gandhi donning the jacket at a music event in Shillong on Tuesday.


ಎನ್ ಡಿಎ ಸರ್ಕಾರವನ್ನು ಸದಾ ಸೂಟ್ ಬೂಟ್ ಸರ್ಕಾರ ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಜಾಕೆಟ್ ಬೆಲೆ ಎಷ್ಟು ಎಂದು ಕೇಳುವ ಮೂಲಕ ಬಿಜೆಪಿ ಪ್ರತಿಪ್ರಶಸ್ನೆ ಹಾಕಿದೆ.

ಮೇಘಾಲಯದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಧರಿಸಿದ್ದ ಜಾಕೆಟ್ ಬೆಲೆ 68,145 ರೂ.! ಬ್ರಿಟಿಷ್ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಬರ್ಬೆರಿಯ ಈ ಜಾಕೆಟ್ ಅನ್ನಿಟ್ಟುಕೊಂಡು ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಚೆನ್ನಾಗಿ ಗೇಲಿ ಮಾಡುತ್ತಿದೆ.

ಮೇಘಾಲಯದ ಸೂಟ್ ಬೂಟ್ ಸರ್ಕಾರ ಕಪ್ಪು ಹಣದ ಮೂಲಕ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ. ನೀವು ಹೀಗೆ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು, ಮೇಘಾಲಯದಲ್ಲಿರುವ ನಿಮ್ಮ ಅದಕ್ಷ ಸರ್ಕಾರ ಏನು ಮಾಡಿದೆ ಎಂಬ ಒಂದು ವರದಿಯನ್ನು ಸಿದ್ಧಪಡಿಸಿಕೊಡಿ ಎಂದು ಮೇಘಾಲಯ ಬಿಜೆಪಿ ಟ್ವೀಟ್ ಆಡಿದೆ.

Recommended