'ಕುರುಕ್ಷೇತ್ರ' ಮಾಡಿದ್ದಕ್ಕೆ ದರ್ಶನ್ ಗೆ ಸಿಕ್ಕ ಸ್ಪೆಷಲ್ ಉಡುಗೊರೆ | Filmibeat Kannada

  • 6 years ago
ಸಾಮಾನ್ಯವಾಗಿ ಒಬ್ಬ ಹೀರೋ ಒಂದು ಸಿನಿಮಾ ಮಾಡಿದಾಗ, ಆ ಚಿತ್ರದ ನಿರ್ಮಾಪಕ ಹೆಚ್ಚು ಸಂಭಾವನೆ ನೀಡಿ ಸುಮ್ಮನಾಗ್ತಾರೆ. ಅದನ್ನ ಮೀರಿದ ಕೆಲವು ನಿರ್ಮಾಪಕರು ಬಂದ ಲಾಭದಲ್ಲಿ ಏನಾದರೂ ಉಡುಗೊರೆಯನ್ನ ನೀಡಿರುವುದನ್ನ ಗಮನಿಸಿದ್ದೀವಿ. ಈಗ ಅಂತಹದ್ದೇ ಘಟನೆ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ನಡೆದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಖುಷಿಯಲ್ಲಿರುವ ನಿರ್ಮಾಪಕ ಮುನಿರತ್ನ ದುರ್ಯೋಧನ ಪಾತ್ರ ನಿರ್ವಹಿಸಿರುವ ದರ್ಶನ್ ಗೆ ಅತ್ಯಮೂಲ್ಯವಾದ ಉಡುಗೊರೆ ನೀಡಿದ್ದಾರಂತೆ.

ಈ ಮೂಲಕ ದಾಸನ 50ನೇ ಚಿತ್ರವನ್ನ ಮತ್ತಷ್ಟು ಸ್ಮರಿಸುವಂತೆ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ಅಷ್ಟಕ್ಕೂ, ಕುರುಕ್ಷೇತ್ರ ಸೆಟ್ ನಲ್ಲಿ ದುರ್ಯೋಧನ ದರ್ಶನ್ ಗೆ ಸಿಕ್ಕ ಗಿಫ್ಟ್ ಏನು? 50ನೇ ಚಿತ್ರದಲ್ಲಿ ದುರ್ಯೋಧನ ಪಾತ್ರ ಮಾಡಿದ ಕಾರಣ, ಕುರುಕ್ಷೇತ್ರ ಸೆಟ್ ನಲ್ಲಿ ಇಷ್ಟವಾಗಿದ್ದನ್ನ ಮನೆಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

Gadha, Kirita are what Darshan wants to take back from Kurukshetra sets. he played his favourite character Duryodhana in kurukshetra movie which is also his 50th movie

Recommended