ಮಹಾಮಸ್ತಕಾಭಿಷೇಕ 2018 : ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆ ನಿರ್ಮಾಣ | Oneindia Kannada

  • 6 years ago
The next month, Mahamastakabhisheka will be held at the Vindhyagiri of Shravanabelagola. This is the first time a platform has been built using German technology to facilitate the seers and Munis to perform the Mahamastakabhisheka.


ಮುಂದಿನ ತಿಂಗಳು ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿರುವ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ಮಹಾಮಜ್ಜನಕ್ಕೆ ಇದೇ ಮೊದಲ ಬಾರಿಗೆ ಜರ್ಮನ್ ತಂತ್ರಜ್ಞಾನ ಬಳಸಿ ಅಟ್ಟಣಿಗೆಯನ್ನು ನಿರ್ಮಿಸುತ್ತಿರುವುದು ವಿಶೇಷವಾಗಿದೆ.

ದೂರದಿಂದ ಬರುವ ಯಾತ್ರಾರ್ಥಿಗಳ ವಸತಿಗೆ ಸಂಬಂಧಿಸಿದಂತೆ ತ್ಯಾಗಿ ನಗರ, ಕಳಶ ನಗರ 1 ಮತ್ತು 2, ಪಂಚ ಕಲ್ಯಾಣ ನಗರ, ಯಾತ್ರಿ ನಗರ, ಸ್ವಯಂ ಸೇವಕರ ನಗರ ಹೀಗೆ ಎಲ್ಲಾ ಕ್ಷೇತ್ರದವರನ್ನೊಳಗೊಂಡ 12 ಉಪ ನಗರಗಳನ್ನು ನಿರ್ಮಾಣ ಮಾಡಲಾಗಿದೆ. ಈ ನಗರಗಳು ಸಕಲ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, 600 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಇವು ನಿರ್ಮಾಣವಾಗಿವೆ.

ಈ ಉಪ ನಗರಗಳಲ್ಲಿ ಯಾತ್ರಾರ್ಥಿಗಳಿಗೆ ಅಗತ್ಯ ಶೌಚಾಲಯ, ಸ್ನಾನಗೃಹ, ಆಸ್ಪತ್ರೆ, ಪೊಲೀಸ್ ಠಾಣೆ, ಕುಡಿಯುವ ನೀರಿನ ಕೇಂದ್ರ ಸೇರಿದಂತೆ ಊಟದ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ.

ವಿಂಧ್ಯಗಿರಿ ಬೆಟ್ಟದ ಮೇಲೆ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕಕ್ಕೆ ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ಅಟ್ಟಣಿಗೆಯಲ್ಲಿ ಸುಮಾರು 5,500 ಜನ ಕುಳಿತು ಬಾಹುಬಲಿ ಮೂರ್ತಿಯ ಅಭಿಷೇಕದ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಈ ಅಟ್ಟಣಿಗೆ ನಿರ್ಮಾಣದ ಜತೆಗೆ ಮೂರು ನವೀನ ರೀತಿಯ ಲಿಫ್ಟ್ ಗಳನ್ನು ಕೂಡ ನಿರ್ಮಿಸಲಾಗಿದೆ.

Recommended