ಬಿ ಎಸ್ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರದಿಂದ ಆರ್ ಅಶೋಕ್ ಬೇಸರ | Oneindia Kannada

  • 6 years ago
Housing Minister M. Krishnappa and his son, Priya Krishna, are likely to join the BJP. According to sources, talks are ongoing. The BJP's stronger leader, former Deputy Chief Minister R. Ashok is angered about this decision.


ವಸತಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ, ಶ್ರೀಮಂತ ಶಾಸಕ ಪ್ರಿಯಾಕೃಷ್ಣ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಈ ಬಗ್ಗೆ ಮಾತುಕತೆಗಳು ಚಾಲ್ತಿಯಲ್ಲಿವೆ.

ಇಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಂಡು ಎರಡು ಕ್ಷೇತ್ರಗಳನ್ನು ಗೆಲ್ಲುವುದು ಜತೆಗೆ ಒಕ್ಕಲಿಗ ಸಮುದಾಯದ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ತಂತ್ರವಾಗಿದೆ.

ಆದರೆ, ಒಕ್ಕಲಿಗ ನಾಯಕರಾದ ತಂದೆ-ಮಗನನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ಪಕ್ಷದಲ್ಲೇ ಅಸಮಾಧಾನ ಹೊಗೆಯಾಡುತ್ತಿದೆ. ಮುಖ್ಯವಾಗಿ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಈ ನಿರ್ಧಾರದ ಬಗ್ಗೆ ಬೇಸರಗೊಂಡಿದ್ದಾರೆ.

ಪ್ರಿಯಾಕೃಷ್ಣ ಮತ್ತು ಎಂ.ಕೃಷ್ಣಪ್ಪರನ್ನು ಬಿಜೆಪಿಗೆ ಸೇರಿಸುವುದರಿಂದ ಎರಡು ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು ಎಂಬುದು ಬಿಜೆಪಿ ಸರಳ ಲೆಕ್ಕಾಚಾರ.

ಕೃಷ್ಣಪ್ಪ ಪ್ರತಿನಿಧಿಸುವ ವಿಜಯನಗರ ಹಾಗೂ ಪ್ರಿಯಾಕೃಷ್ಣಪ್ರತಿನಿಧಿಸುವ ಗೋವಿಂದರಾಜನಗರದಲ್ಲಿ ಇಬ್ಬರೂ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ.

Recommended