ಜಿಎಸ್ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಮೇಲೆ ತೆರಿಗೆ ಕಡಿತ? | Oneindia Kannada

  • 6 years ago
ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಿನ್ನೆ(ಜ.18) ನಡೆದ 25 ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 29 ವಸ್ತುಗಳ ಜಿಎಸ್ಟಿ ದರವನ್ನು ಕಡಿತಗೊಳಿಸಲಾಗಿದೆ. ಜಿಎಸ್ಟಿ ಹೊರೆಯಿಂದ ಪರಿತಪಿಸುತ್ತಿದ್ದ ಶ್ರೀಸಾಮಾನ್ಯನಿಗೆ ಇದು ಸಿಹಿಸುದ್ದಿ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್ಟಿ ಅಡಿಯಲ್ಲಿ ತರುವ ಪ್ರಸ್ತಾಪದ ಕುರಿತು ನಿನ್ನೆಯ ಸಭೆಯಲ್ಲಿ ಚರ್ಚೆ ನಡಡೆದಿಲ್ಲ ಎಂದು ಸ್ವತಃ ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ಸಭೆಯಲ್ಲಿ ಐಟಿ ರಿಟರ್ನ್ಸ್ ಫೈಲಿಂಗ್ ಪ್ರಕ್ರಿಯೆಯನ್ನೂ ಸರಳಗೊಳಿಸುವ ಕುರಿತಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಗಳನ್ನೂ ಜಿಎಸ್ಟಿ ಅಡಿಯಲ್ಲಿ ತರುವ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಈಗಾಗಲೇ 29 ವಸ್ತುಗಳ ಮೇಲೆ ಕಡಿತಗೊಳಿಸಲಾದ ಪರಿಷ್ಕೃತ ಜಿಎಸ್ಟಿ ದರ ಜ.25 ರಿಂದ ಅನ್ವಯವಾಗಲಿದೆ.

ನಿನ್ನೆ ನಡೆದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಂತೆ ಯಾವೆಲ್ಲ ವಸ್ತುಗಳ ಮೇಲಿನ ಜಿಎಸ್ಟಿ ದರ ಕಡಿಮೆಯಾಗಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
The GST Council on Thursday met for the 25th time, following which Finance Minister Arun Jaitley announced that tax rates on 29 items and 53 categories of services will be put in a lower category.

Recommended