ಸಲ್ಮಾನ್ ಖಾನ್ ರ ಟೈಗರ್ ಜಿಂದಾ ಹೇ ಸಿನಿಮಾ ನರೇಂದ್ರ ಮೋದಿಗೆ ಅರ್ಪಣೆ | Oneindia Kannada

  • 6 years ago
Salman Khan and Katrina Kaif starer 'Tiger Zinda Hai' is a tribute to Prime Minister Narendra Modi. Director Ali Abbas Zafar has revealed the biggest kept secret of film. The plot of the film is inspired from the 2014 hostage rescue operation that India pulled off to save the lives of 46 of its nurses held captive by the Islamic State (ISIS) in Iraq.

ಬಾಲಿವುಡ್ ಚಿತ್ರ ಜಗತ್ತಿನ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಪ್ರಮುಖ ಭೂಮಿಕೆಯಲ್ಲಿರುವ 'ಟೈಗರ್ ಜಿಂದಾ ಹೇ' ಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅರ್ಪಿಸಲು ಚಿತ್ರತಂಡ ನಿರ್ಧರಿಸಿದೆ.ಕಳೆದ ವಾರ ಬಿಡುಗಡೆಗೊಂಡು ಈಗಾಗಲೇ ಇನ್ನೂರು ಕೋಟಿಗೂ ಮೇಲೆ ವಹಿವಾಟು ನಡೆಸಿರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್, ಪರೇಶ್ ರಾವಲ್, ಅಂಗದ್ ಬೇಡಿ ಮುಂತಾದವರಿದ್ದಾರೆ. ಚಿತ್ರವನ್ನು ಆಲಿ ಅಬ್ಬಾಸ್ ಜಫರ್ ನಿರ್ದೇಶಿಸಿದ್ದರು.ನೈಜಕಥೆಯನ್ನಾಧರಿಸಿದ ಚಿತ್ರವಿದು ಎಂದು ಹೇಳಿರುವ ನಿರ್ದೇಶಕ ಜಫರ್, ಈ ಚಿತ್ರವನ್ನು ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಖಾತೆಯ ಸಚಿವೆ ಸ���ಷ್ಮಾ ಸ್ವರಾಜ್ ಅವರಿಗೆ ಅರ್ಪಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.ಪ್ರಧಾನಿಯವರ ಕಾರ್ಯಕ್ಷಮತೆಯ ಬಗ್ಗೆ ಚಿತ್ರದಲ್ಲೇ ಉಲ್ಲೇಖಿಸಲು ನಾವು ನಿರ್ಧರಿಸಿದ್ದೆವು, ಆದರೆ ಅದಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. ಐಸಿಎಸ್ ಉಗ್ರರು ಭಾರತೀಯ ನರ್ಸುಗಳನ್ನು ಒತ್ತೆಯಾಗಿರಿಸಿಕೊಂಡಿದ್ದ ಕಥಾಹಂದರವನ್ನು ಚಿತ್ರ ಹೊಂದಿದೆ.

Recommended