ಸೋನಿಯಾ ಗಾಂಧಿಯವರಿಂದ ಪರಿಚಯವಾದ ರಾಜಕೀಯ ನಿವೃತ್ತಿ | Oneindia Kannada

  • 6 years ago
Congress leader Sonia Gandhi spoke about retirement from politics at the age of 71, after Rahul Gandhi elevation as AICC president. Then what should these leaders should do? DMK leader M.Karunanidhi and BJP leader L K Advani more than 90 years. SM Krishna, HD Deve Gowda.

'ರಾಜಕೀಯ ನಿವೃತ್ತಿ' ಎಂಬ ಪದವೇ ನಮಗೆ, ಅಂದರೆ ಭಾರತೀಯರಿಗೆ ತೀರಾ ಹೊಸದು. ನೆನಪಿನ ಶಕ್ತಿಯೇ ಕುಂದು ಹೋಗಿ, ಸ್ವಂತ ಬಲದಿಂದ ಸಹಿಯನ್ನೂ ಮಾಡಲಾಗದ ರಾಜಕಾರಣಿಗಳು 'ಮುತ್ಸದ್ಧಿ' ಎಂಬ ಕೋಟಾದಡಿ ಚಲಾವಣೆಯಲ್ಲಿರುತ್ತಾರೆ. ಆದರೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವೃತ್ತಿ ಎಂಬ ಪದವನ್ನಾದರೂ ಬಳಸಿದ್ದಾರೆ. ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದರೆ ನಾನಿನ್ನು ನಿವೃತ್ತಿ ಆಗಬಹುದು ಎಂಬ ಮಾತನ್ನಾದರೂ ಆಡಿದ್ದಾರೆ. ಭಾರತದ ರಾಜಕೀಯ ಅವರ ಮೇಲೆ ಪ್ರಭಾವ ಬೀರಿಲ್ಲ ಎಂಬುದರ ಸೂಚನೆ ಕೂಡ ಇದಾಗಿರಬಹುದು. ಇಲ್ಲದಿದ್ದರೆ ರಾಜಕಾರಣ ಅಂದರೆ ಅಲ್ಲಿ ನಿವೃತ್ತಿ ಎಂಬುದಕ್ಕೆ ಮಾನ್ಯತೆಯೂ ಇಲ್ಲ, ಘನತೆಯೂ ಇಲ್ಲ ಎಂಬ ಸಂಗತಿಯನ್ನು ನಿರ್ಲಕ್ಷಿಸುತ್ತಿರಲಿಲ್ಲವೇನೋ.ಹೊಸ ತಲೆಮಾರಿನ ರಾಜಕಾರಣಿಗಳು ವಿದ್ಯಾಭ್ಯಾಸದ ಬಗ್ಗೆ ಮಾತನಾಡುತ್ತಿದ್ದಾರೆ, ನಿವೃತ್ತಿ ಇರಬೇಕು ಎಂಬ ಬಗ್ಗೆ ಧ್ವನಿ ಎತ್ತಿದ್ದಾರೆ. ಒಂದಿಷ್ಟು ಸಂಸ್ಕಾರ, ಸಭ್ಯ ಎನಿಸುವ ಭಾಷೆ, ಹೇಳಿದ ಮಾತಿಗೆ ಅಂಟಿಕೊಳ್ಳುವ ಘನತೆ ಬಗ್ಗೆ ಈಗಲೂ ಗಟ್ಟಿಯಾದ ಧ್ವನಿ ಎತ್ತಿಲ್ಲ ಅನ್ನೋ ಮಾತು ಬಿಡಿ. ಆದರೆ ಸೋನಿಯಾ ಗಾಂಧಿಯವರು ನಿವೃತ್ತಿ ಘೋಷಿಸುವ ಮೂಲಕ ಖಂಡಿತಾ 'ಮಾದರಿ' ಆಗಬೇಕು.

Recommended