ಸೋನಿಯಾ ಗಾಂಧಿ ರಾಜಕೀಯ ಪ್ರಯಾಣ ಎಲ್ಲಿಂದ ಶುರುವಾಯ್ತು ಅಲ್ಲಿಂದ ಅಂತ್ಯ | Oneindia Kannada

  • 6 years ago
After the elevation of Rahul Gandhi as AICC president, Sonia Gandhi announced political retirement. Watch video to know more about Sonia Gandhi's political journey.


"ಇದೀಗ ನಿವೃತ್ತಿಯ ಸಮಯ. ಇನ್ನು ಮುಂದೆ ಪಕ್ಷದ ಜವಾಬ್ದಾರಿ ರಾಹುಲ್ ನದು" ಎಂದಿದ್ದಾರೆ ಸೋನಿಯಾ ಗಾಂಧಿ. ಹತ್ತೊಂಬತ್ತು ವರ್ಷ ಒಂಬತ್ತು ತಿಂಗಳ ಸುದೀರ್ಘ ಅವಧಿಗೆ ಕಾಂಗ್ರೆಸ್ ನ ಅಧ್ಯಕ್ಷೆಯಾಗಿದ್ದ ಅವರು, ರಾಜಕೀಯದಿಂದಲೇ ನಿವೃತ್ತಿ ಆಗುವ ಮಾತನ್ನಾಡಿದ್ದಾರೆ. ಅಂದಹಾಗೆ ಡಿಸೆಂಬರ್ ಒಂಬತ್ತನೇ ತಾರೀಕಿಗೆ ಸೋನಿಯಾ ಗಾಂಧಿ ಅವರಿಗೆ ಎಪ್ಪತ್ತೊಂದು ವರ್ಷ ತುಂಬಿತು. ಅದಾಗಿ ಒಂದು ವಾರಕ್ಕೆ (ಡಿಸೆಂಬರ್ 16, ಶನಿವಾರ) ಭಾರತದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಎಂಬ ಹಡಗಿನ ಚುಕ್ಕಾಣಿಯನ್ನು ಅವರ ಮಗ ರಾಹುಲ್ ಗಾಂಧಿ ಹಿಡಿಯಲಿದ್ದಾರೆ.ಆದರೆ, ಈ ಸನ್ನಿವೇಶ ಕಾಂಗ್ರೆಸ್ ಗೆ ಅಂಥ ಅನುಕೂಲಕರವಾಗೇನಿಲ್ಲ. ಹಾಗಂತ ಸೋನಿಯಾ ಗಾಂಧಿ ಅವರು ನೇತೃತ್ವ ವಹಿಸಿದಾಗ ಅನುಕೂಲವಾಗಿತ್ತಾ ಅಂದರೆ, ಆಗಲೂ ಇರಲಿಲ್ಲ. ಸಾಲುಸಾಲಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ವೈಫಲ್ಯಕ್ಕೆ ರಾಹುಲ್ ಗಾಂಧಿಯನ್ನೇ ಬೊಟ್ಟು ಮಾಡಿ ತೋರುವವರು ಆ ಪಕ್ಷದಲ್ಲೇ ಈಗ ಇದ್ದಾರೆ.

Recommended