ದರ್ಶನ್ 'ಕುರುಕ್ಷೇತ್ರ' ಚಿತ್ರದ 'ಶಕುನಿ' ಲುಕ್ ರಿವಿಲ್ | Filmibeat Kannada

  • 6 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರ್ತಿರುವ 'ಕುರುಕ್ಷೇತ್ರ' ಚಿತ್ರದಲ್ಲಿ ಅದ್ಧೂರಿ ತಾರಾಗಣ ಇದೆ. ದರ್ಶನ್, ರಾಕ್ ಲೈನ್ ವೆಂಕಟೇಶ್, ಮೇಘನಾರಾಜ್, ಶಶಿಕುಮಾರ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ಅಂಬರೀಶ್ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ಇವರುಗಳ ಜೊತೆಯಲ್ಲಿ ವಿಲನ್ ರವಿಶಂಕರ್ 'ಶಕುನಿ' ಪಾತ್ರವನ್ನ ನಿರ್ವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ರವಿಶಂಕರ್ ಅವರ ಫಸ್ಟ್ ಲುಕ್ ಫೋಟೋವನ್ನು ರಿಲೀಸ್ ಮಾಡಿದ್ದರು. ಆದ್ರೀಗ, ಕುರುಕ್ಷೇತ್ರ ಚಿತ್ರದಲ್ಲಿ ರವಿಶಂಕರ್ ಅವರ ನೈಜ ಗೆಟಪ್ ಬಹಿರಂಗವಾಗಿದೆ. ಅಭಿಮಾನಿಗಳ ಜೊತೆಯಲ್ಲಿ ನಟ ರವಿಶಂಕರ್ ಶಕುನಿ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಲೀಕ್ ಆಗಿವೆ. ಸಾಮಾನ್ಯವಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ರವಿಶಂಕರ್ ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳಿಗೆ ಬೇರೆಯದ್ದೇ ಲುಕ್ ನಲ್ಲಿ ರವಿಶಂಕರ್ ರನ್ನ ನೋಡೋವ ಅವಕಾಶ 'ಕುರುಕ್ಷೇತ್ರ' ಚಿತ್ರದ ಮೂಲಕ ಸಿಗಲಿದೆ. 'ಶಕುನಿ' ಗೆಟಪ್ ನಲ್ಲಿ ರವಿಶಂಕರ್ ಹೇಗಿದ್ದಾರೆ? ಶಕುನಿ ಕ್ಯಾರೆಕ್ಟರ್ ಗಾಗಿ ರವಿಶಂಕರ್ ಮಾಡಿಕೊಂಡ ತಯಾರಿಗಳೇನು? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.


one of the best movie upcoming movie is kurukshethra, Actor P Ravi Shankar is playing the role of Shakuni inthis movie. Directed by film director Naganna.

Recommended