ಭಾರತ ಹಾಗು ಪಾಕಿಸ್ತಾನ ಶೀಘ್ರದಲ್ಲೇ ಕ್ರಿಕೆಟ್ ಮ್ಯಾಚ್ ಆಡಲಿದೆಯಾ ? | Oneindia Kannada

  • 6 years ago
ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತನ್ನ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಭಾರತದ ವಿರುದ್ಧ ಆಡಲಿದೆ. 2019-2020ರಲ್ಲಿ ಅಫ್ಘಾನಿಸ್ತಾನ-ಭಾರತ ಟೆಸ್ಟ್ ಪಮದ್ಯ ನಡೆಯಲಿದ್ದು, ಸರಣಿಯ ಆತಿಥ್ಯವನ್ನು ಭಾರತವೇ ವಹಿಸಲಿದೆ ಹೀಗೆಂದು ಈ ವಿಷಯವನ್ನು ಬಿಸಿಸಿಐ ಸ್ಪಷ್ಟಪಡಿಸಿದೆ. ಭಾರತ ಸರ್ಕಾರ ಒಪ್ಪಿಗೆ ನೀಡುವುದಾದರೆ ಬಿಸಿಸಿಐ ಭಾರತ-ಪಾಕಿಸ್ತಾನ ಸರಣಿ ಆಯೋಜಿಸಲು ಸಿದ್ದವಿದೆ ಎಂದು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌದರಿ ಇದೇ ಸಮಯದಲ್ಲಿ ಹೇಳಿದರು.ಬಿಸಿಸಿಐ ಜತೆಗೆ ಉತ್ತಮ ಬಾಂದವ್ಯ ಹೊಂದಿರುವ ಅಫ್ಘಾನಿಸ್ತಾನ ತನ್ನ ತವರು ನೆಲದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ-ಐರ್ಲೆಂಡ್ ನಡುವಿನ ಪಂದ್ಯವನ್ನು ಬಿಸಿಸಿಐ ಅನುಮತಿಯೊಂದಿಗೆ ಭಾರತದ ಗ್ರೇಟರ್ ನೋಯಿಡಾದಲ್ಲಿ ನಡೆಸಿತ್ತು. ಭಾರತ-ಪಾಕಿಸ್ತಾನ ನಡುವಿನ ಸಂಬಂದ ವಿಷಮ ಪರಿಸ್ಥಿತಿಯಲ್ಲಿರುವುದರಿಂದ ಭಾರತ ಸರ್ಕಾರ ಕ್ರಿಕೆಟ್ ಸರಣಿಗೆ ಹಸಿರು ನಿಶಾನೆ ತೋರಿಸುವುದು ಕಷ್ಟಸಾಧ್ಯ ಎನಿಸಿದೆ. ಆದರೆ ಬಿಸಿಸಿಐ ಭಾರತ-ಪಾಕಿಸ್ತಾನ ಸರಣಿ ಆಯೋಜಿಸಲು ಉತ್ಸುಕವಾಗಿರುವುದು ಕ್ರೀಡಾ ಪ್ರೇಮಿಗಳಲ್ಲಿ ಸಣ್ಣ ಆಸೆ ಚಿಗುರಿಸಿದೆ.

Ireland and Afghanistan after becoming the complete members of ICC, will be the 11th and 12th test playing nations . India is hosting the test match against Afghanistan

Recommended