ರವಿ ಬೆಳಗೆರೆ 2ನೇ ಪತ್ನಿ ಯಶೋಮತಿ ಫೇಸ್ ಬುಕ್ ಸ್ಟೇಟಸ್ ನೋಡಿ | Oneindia Kannada

  • 6 years ago
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂಧನದ ಬಗ್ಗೆ 2ನೇ ಪತ್ನಿ ಯಶೋಮತಿ ಮೌನ ಮುರಿದಿದ್ದಾರೆ.ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರವಿ ಬೆಳಗೆರೆ, ನ್ಯಾಯಾಂಗ ಬಂಧನಲ್ಲಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.ಯಶೋಮತಿ ಅವರು ಇಂದು ಸಂಜೆ ಫೇಸ್‌ ಬುಕ್‌ನಲ್ಲಿ ಹಾಕಿರುವ ಸ್ಟೇಟಸ್‌ ಹೀಗಿದೆ.'ಮೊನ್ನೆ ತಾನೇ ನಡೆದ ಹಿಮನ ಬರ್ತ್ ಡೇಯ ಫೊಟೋಗಳನ್ನು ನೋಡುತ್ತಾ ಕುಳಿತಿದ್ದೆ. ಅದರಲ್ಲಿ ಕೆಲವನ್ನು select ಮಾಡಿ ರವಿಗೆ ಕಳಿಸಬೇಕು ಅಂದುಕೊಳ್ಳುವಷ್ಟರಲ್ಲಿ.... "ಯಶೂ ಮಾ ಎಲ್ಲಿದ್ದೀರ? ಒಂದು ಸ್ವಲ್ಪ ಟಿವಿ ನೋಡಿ" ಅಂದ ಕೂಡಲೇ ಅದನ್ನು ಅಲ್ಲೇ ಬಿಟ್ಟು ಟಿವಿ ಆನ್ ಮಾಡಿದವಳ ಕಿವಿಗೆ ಮೊದಲು ರಾಚಿದ್ದೇ ನನ್ನ ಹೆಸರು... ಏನಾಗ್ತಿದೆ? ನನ್ನ ಹೆಸರು ಯಾಕೆ ಬರ್ತಿದೆ ಅದೂ ನಂಗೇ ಗೊತ್ತಿಲ್ಲದೇ.... ಹಿಮ ಬೇರೆ ಸ್ಕೂಲಿಂದ ಬರುವ ಹೊತ್ತಾಗಿತ್ತು. ಮೊದಲು ಓಡಿ ಹೋಗಿ ಅವನನ್ನು ಕರೆದುಕೊಂಡು ಬಂದೆ.
Ravi Belagere 2nd wife Yashomathy broke his silence on arrest of Hai Bangalore editor arrested Ravi Belagere. Ravi Belagere arrested for allegedly giving Supari to kill fellow journalist Sunil Heggaravalli now he is in judicial custody.

Recommended