ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್ ವುಡ್ ತಾರೆಯರು | Filmibeat Kannada

  • 6 years ago
ಈ ವರ್ಷ ಕನ್ನಡದಲ್ಲಿ ಎಷ್ಟು ಸಿನಿಮಾ ಬಂತು, ಎಷ್ಟು ಸಿನಿಮಾ ಹಿಟ್ ಆಯ್ತು. ಎಷ್ಟು ಸಿನಿಮಾ ಫ್ಲಾಫ್ ಆಯ್ತು ಎಂಬುದನ್ನ ಸ್ವಲ್ಪ ಪಕ್ಕಕ್ಕೆ ಇಡಿ. ಈ ವರ್ಷ ಎಷ್ಟು ಜನ ಸಿನಿಮಾ ತಾರೆಯರು ಮದುವೆ ಆದರು ಎಂಬುದನ್ನ ಸ್ವಲ್ಪ ನೆನಪಿಸಿಕೊಳ್ಳಿ. ಯಾರು ಯಾರು ಮದುವೆ ಆದ್ರೂ ಅಂತ ನೆನಪಾಗಲಿಲ್ಲ ಅಂದ್ರೆ, ಜಾಸ್ತಿ ಯೋಚನೆ ಮಾಡ್ಬೇಡಿ. ಅದನ್ನ ನಾವೇ ಹೇಳ್ತಿವಿ. ಈ ವರ್ಷ ಬರೋಬ್ಬರಿ 15 ಜನ ಸಿನಿಮಾ ತಾರೆಯರು ಸಪ್ತಪದಿ ತುಳಿದಿದ್ದಾರೆ.14 ಜನ ಸೆಲೆಬ್ರಿಟಿಗಳು ಮದುವೆ ಆದ್ರಾ? ಹಾಗಿದ್ರೆ, ಈ ವರ್ಷ ಯಾರೆಲ್ಲಾ ನೂತನ ಬಾಳಿಗೆ ಅಡಿಯಿಟ್ಟರು ಎಂಬುದರ ಬಗ್ಗೆ ಪೂರ್ತಿ ವಿವರ ನೀಡಿದ್ದೇವೆ.'ಕಿರಿಕ್ ಪಾರ್ಟಿ' ನಿರ್ದೇಶಕ ರಿಶಬ್ ಶೆಟ್ಟಿ ಈ ವರ್ಷ ಮದುವೆಯಾದ ಮೊದಲ ಸೆಲೆಬ್ರಿಟಿ. ವೃತ್ತಿಪರ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಪ್ರಗತಿ ಶೆಟ್ಟಿ ಜೊತೆ ವೈವಾಹಿಕ ಜೀವನ ಆರಂಭಿಸಿದರು. ಫೆಬ್ರವರಿ 9ರ ಮಧ್ಯಾಹ್ನ 12.25ಕ್ಕೆ ಇದ್ದ ಶುಭ ಮುಹೂರ್ತದಲ್ಲಿ ರಿಶಬ್-ಪ್ರಗತಿ ಹಸೆಮಣೆ ಏರಿದರು. ಉಡುಪಿ ಜಿಲ್ಲೆಯ ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ರಿಶಬ್ ಶೆಟ್ಟಿ-ಪ್ರಗತಿ ಶೆಟ್ಟಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು.


these are beautiful couples are getting married in this year 2017 and started a new life with partner ,We have been fully informed about who has started new life in this year. watch this video

Recommended