ಆಧಾರ್ ಜೋಡಣೆಯ ಕೊನೆಯ ದಿನಾಂಕ ಮುಂದೂಡಿಕೆ,ಆದರೆ ಷರತ್ತುಗಳು ಅನ್ವಯ | Oneindia Kannada

  • 6 years ago
ಬ್ಯಾಂಕ್ ಖಾತೆಗೆ ಮತ್ತು ವಿವಿಧ ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದಕ್ಕೆ ಡಿಸೆಂಬರ್ 31 ಕಡೆಯ ದಿನಾಂಕ ಎಂದು ಈ ಮೊದಲು ಭಾರತ ಸರ್ಕಾರ ಹೇಳಿತ್ತು.ಆದರೆ ಈ ದಿನಾಂಕವನ್ನು ಮಾರ್ಚ್ 31 ಕ್ಕೆ ಮುಂದೂಡಲು ನಿರ್ಧರಿಸಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಆಧಾರ್ ಕಾರ್ಡ್ ಅನ್ನು ಹೊಂದಿರದಿರುವವರಿಗೆ ಮಾರ್ಚ್ ಅಂತ್ಯದವರೆಗೂ ಸಮಯಾವಕಾಶ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ.ಆದರೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಜೋಡಿಸಲು ಫೆಬ್ರವರಿ 6 ಕೊನೆಯ ದಿನಾಂಕ. ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.ಆದರೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಹಲವರು, ಈ ಷರತ್ತುಬದ್ಧ ಮುಂದೂಡಿಕೆಯನ್ನೂ ವಿರೋಧಿಸಿದ್ದಾರೆ.

Aadhar card linking has been postponed to march 31st with lots of conditions .

Recommended