ಗುಜರಾತ್ ವಿಧಾನಸಭಾ ಚುನಾವಣೆ 2017 : ಸಮೀಕ್ಷೆಯ ಭವಿಷ್ಯ | Oneindia Kannada

  • 6 years ago
ಹೃದಯದಲ್ಲಿ ಅಳುಕನ್ನು ಇಟ್ಟುಕೊಂಡೇ ಮನದಲ್ಲಿ ಮಂಡಿಗೆ ಮೆಲ್ಲುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಗುಜರಾತ್ ನಲ್ಲಿ ಭಾರೀ ಅಚ್ಚರಿ ಮೂಡಿಸುವಂಥ, ಹೃದಯ ಬಡಿತ ಹೆಚ್ಚಿಸುವಂಥ ಸುದ್ದಿ ಚುನಾವಣಾ ಸಮೀಕ್ಷೆಯೊಂದರಿಂದ ಹೊರಬಿದ್ದಿದೆ. 182 ವಿಧಾನಸಭಾ ಕ್ಷೇತ್ರಗಳಲ್ಲಿ ನೂರಾಐವತ್ತಲ್ಲ, ನೂರಾಅರವತ್ತೈದು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಮಿತ್ ಶಾ ಅವರಿಗೆ ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಮುಟ್ಟಿ ನೋಡಿಕೊಳ್ಳುವಂಥ ಅಚ್ಚರಿಯನ್ನು ಹೊರಹಾಕಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ ಕಳೆದ 22 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬಂದಿದೆ. ಪ್ರತಿ ಚುನಾವಣೆಯಲ್ಲಿ ಭಾರೀ ಜಯಭೇರಿ ಬಾರಿಸುತ್ತಿದ್ದ ಬಿಜೆಪಿಗೆ ಈ ಬಾರಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತುರುಸಿನ ಟಕ್ಕರ್ ನೀಡಲಿದೆ ಎಂದು ತಿಳಿದುಬಂದಿದೆ.ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶ, ಎಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ನಗೆಯನ್ನು ಕಸಿದುಕೊಳ್ಳಲಿದೆ.
A poll conducted ahead of the Gujarat elections has suggested a photo finish. The Lokniti-CSDS-ABP News predicted an equal vote share for both the BJP and Congress. Amit Shah was dreaming of winning 165 seats out of 182 seats.

Recommended