ಮದುವೆಯ ಮೊದಲ ವಾರ್ಷಿಕೋತ್ಸವಕ್ಕೆ ರಾಧಿಕಾ ಮಾಡಿರೋ ಪ್ಲಾನ್ ಅದ್ಭುತ | Filmibeat Kannada

  • 6 years ago
ರಾಧಿಕಾ ಪಂಡಿತ್-ಯಶ್ ಚಂದನವನದ ಮುದ್ದಾದ ಜೋಡಿ. ಇನ್ನು ಹತ್ತು ದಿನಗಳು ಕಳೆದರೆ, ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ತುಂಬುತ್ತೆ. ಯಶ್ ಮತ್ತು ರಾಧಿಕಾರ ಮದುವೆಯ ಪ್ರತಿ ಹಂತವೂ ತುಂಬಾನೇ ಸ್ಪೆಷಲ್ ಆಗಿತ್ತು. ಎಂಗೆಂಜ್ ಮೆಂಟ್ ನಿಂದ ಹಿಡಿದು ಮದುವೆಯವರೆಗೂ ರಾಧಿಕಾ ತುಂಬಾನೇ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ರು. ಇಡೀ ಸಿನಿಮಾರಂಗ ಹಾಗೂ ಅಭಿಮಾನಿ ಬಳಗವೇ ಎಷ್ಟು ಚೆನ್ನಾಗಿ ಮದುವೆಯಾದ್ರು ಎನ್ನುವ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ವರ್ಷದ ಆಚರಣೆಗೂ ಕೂಡ ತುಂಬಾ ಸ್ಪೆಷಲ್ ಆಗಿ ಪ್ಲಾನ್ ಮಾಡಿದ್ದಾರೆ.ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಮದುವೆ ಆಗಿ ಒಂದು ವರ್ಷದ ತುಂಬಲಿದೆ. ಇನ್ನು ಹತ್ತು ದಿನಗಳು ಕಳೆದರೆ ಯಶ್-ರಾಧಿಕಾ ಅವರ ಮದುವೆಯ ವಾರ್ಷಿಕೋತ್ಸವದ ಸಂಭ್ರಮ ಬರಲಿದೆ. ಯಶಸ್ವಿ ಜೋಡಿಯಾಗಿ ವರ್ಷಗಳ ಕಾಲ ಹ್ಯಾಪಿಯಾಗಿರುವ ತಾರಾ ಜೋಡಿಗೆ ಶುಭಾಶಯ ಕೋರುವ ಸಂದರ್ಭ.ಇನ್ನ ಹತ್ತು ದಿನಗಳು ಅಭಿಮಾನಿಗಳಿಗಾಗಿ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಜೋಡಿಯ ಎಕ್ಸ್‌ ಕ್ಲೂಸಿವ್ ಫೋಟೋಗಳು ನಿಮಗೆ ಸಿಗಲಿದೆ. ಇಂದಿನಿಂದ ಈ ಖುಷಿ ಆರಂಭವಾಗಿದ್ದು ಇನ್ನು ಒಂಬತ್ತು ದಿನಗಳು ವಿಶೇಷವಾದ ಫೋಟೋಗಳನ್ನ ನಿರೀಕ್ಷೆ ಮಾಡಬಹುದು.


Kannada Actor Yash and Radhika to celebrate their first wedding anniversary on December 7th.radhika is planing to celebration in different way for wedding anniversary ,watch this video

Recommended