ರಾಹುಲ್ ಗಾಂಧಿ ತೊಂದರೆಯಲ್ಲಿದ್ದಾರಾ? ಏನಿದು ಬಿಜೆಪಿ ಹೊಸ ಪ್ಲಾನ್ ? | Oneindia Kannada

  • 6 years ago
ತಾವು ತೋಡಿದ್ದ ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?! ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿ, ತಾವೇ ಆಡಿದ ಮಾತುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಬಾಲಿಶ ಹೇಳಿಕೆಗಳನ್ನೇ ಇದೀಗ ಕೆದಕಿ, ಗುಜರಾತ್ ಚುನಾವಣೆಯ ಹೊತ್ತಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆಯಾ? ಹೌದು, ಗುಜರಾತ್ ಚುನಾವಣೆಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಬಿಜೆಪಿ, ಕಾಂಗ್ರೆಸ್ ಉಭಯ ಪಕ್ಷಗಳೂ ಬಿರುಸಿನ ಪ್ರಚಾರಕ್ಕೆತೊಡಗಿವೆ. ಈ ಮಧ್ಯೆ, ಉಗ್ರ ಹಫೀಜ್ ಸಯೀದ್ ಬಿಡುಗಡೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯ ಎಂಬಂತೆ ಬಿಂಬಿಸಿ, 'hugplomacy'ಗೆ ಸೋಲುಂಟಾಗಿದೆ ಎಂದು ಜರೆದಿರುವ ರಾಹುಲ್ ಗಾಂಧಿ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 2010 ರ ಸಮಯದಲ್ಲಿ ಆಡಿದ್ದ ಮಾತುಗಳನ್ನು ಇದೀಗ 'ರಿವೈಂಡ್' ಮಾಡಿರುವ ಬಿಜೆಪಿಯ ಕೇಂದ್ರ ಕಾನೂನು ಸಚಿವ, ಬಿಜೆಪಿಯ ರವಿಶಂಕರ್ ಪ್ರಸಾದ್ ಕಾಂಗ್ರೆಸ್ ಯುವರಾಜರನ್ನು ಲೇವಡಿ ಮಾಡಿದ್ದಾರೆ!
Union Law Minister Ravi Shankar Prasad on Nov 28th raked up a 2010 incident in which Congress Vice President Rahul Gandhi had termed 'Hindu terror' as a threat to the nation instead of Lashkar-e-Taiba (LeT) chief and 2008 Mumbai attack mastermind, Hafiz Saeed.

Recommended